ರೆಪೊ ಮತ್ತು ರಿವರ್ಸ್ ರೆಪೊ ದರ ಯಥಾಸ್ಥಿತಿ

ಮುಂಬೈ, ಫೆ. ೧೦: ದೇಶದಲ್ಲಿ ಕೊರೊನಾ ಮೂರನೇ ಅಲೆ ತಗ್ಗುತ್ತಿರುವ ಸಂದರ್ಭದಲ್ಲಿ ಆರ್ಥಿಕ ಅನಿಶ್ಚಿತತೆ ಇನ್ನೂ ಮುಂದುವರಿದಿರುವಾಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ತ್ರೆöÊಮಾಸಿಕ ವಿತ್ತೀಯ ನೀತಿ ಪ್ರಕಟವಾಗಿದೆ. ಸತತ ೧೦ನೇ ಬಾರಿಗೆ ರೆಪೊ ಮತ್ತು ರಿವರ್ಸ್ ರೆಪೊ ದರವನ್ನು ಯಥಾಸ್ಥಿತಿ ಮುಂದುವರಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ತ್ರೆöÊಮಾಸಿಕದಲ್ಲಿ ರೆಪೊ ದರ ಶೇ. ೪ರಷ್ಟು ಮತ್ತು ರಿವರ್ಸ್ ರೆಪೊ ದರ ಶೇ. ೩.೩೫ರಷ್ಟು ಮುಂದುವರಿಯಲಿದೆ. ವಿತ್ತೀಯ ನೀತಿ ಸಮಿತಿ ಸದಸ್ಯರು ರೆಪೊ ದರವನ್ನು ಬದಲಿಸದೆ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿಸಿದರು ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಕೋವಿಡ್ ಹೊಡೆತದ ಮಧ್ಯೆ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿಯುತ್ತಿದೆ. ಆದರೆ ಉಳಿದ ದೇಶಗಳಿಗಿಂತ ಭಾರತ ವೇಗವಾಗಿ ಮುನ್ನುಗ್ಗಲು ನೋಡುತ್ತಿದೆ. ಅತಿ ವೇಗವಾಗಿ ಬೆಳೆಯುವ ಆರ್ಥಿಕತೆ ಭಾರತವಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು. ಬಡ್ಡಿದರವನ್ನು ಐತಿಹಾಸಿಕ ಕನಿಷ್ಟಮಟ್ಟಕ್ಕೆ ಕಡಿತಗೊಳಿಸುವ ಮೂಲಕ ಬೇಡಿಕೆಯನ್ನು ಹೆಚ್ಚಿಸಲು ಆರ್‌ಬಿಐ ತನ್ನ ನೀತಿಯ ರೆಪೊ ದರವನ್ನು ಮೇ ೨೨, ೨೦೨೦ ರಂದು ಪರಿಷ್ಕರಿಸಿತ್ತು. ಉನ್ನತ ಬ್ಯಾಂಕ್ ಮುಂದಿನ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇಕಡಾ ೭.೮ ಎಂದು ಯೋಜಿಸಿದೆ. ಆರ್‌ಬಿಐ ಹಣಕಾಸು ವರ್ಷ ೨೦೨೨ರಲ್ಲಿ ಶೇಕಡಾ ೫.೩ ಮತ್ತು ೨೦೨೨-೨೩ ರಲ್ಲಿ ಶೇ. ೪.೫ ಸಿಪಿಐ ಹಣದುಬ್ಬರವನ್ನು ನೋಡುತ್ತದೆ. ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ. ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿAದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.

ಅಲ್ ಖೈದಾ, ಐಸಿಸ್ ಒಂದಾಗುತ್ತಿದೆ-ಅಮೇರಿಕಾ ಎಚ್ಚರಿಕೆ

ವಾಷಿಂಗ್ಟನ್, ಫೆ. ೧೦: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ನೆಲದಲ್ಲಿ ಅಲ್ ಖೈದಾ ಮತ್ತು ಐಸಿಸ್ ಉಗ್ರಸಂಘಟನೆಗಳು ಒಗ್ಗಟ್ಟಾಗುತ್ತಿರುವುದಾಗಿ ಅಮೆರಿಕ ಎಚ್ಚರಿಸಿದೆ. ಅಮೆರಿಕದ ಸೇನಾದಂಡನಾಯಕ ಮೈಕೆಲ್ ಎರಿಕ್ ಈ ಬಗ್ಗೆ ಪ್ರಕಟಣೆ ನೀಡಿದ್ದು, ಜಗತ್ತಿನ ಎರಡು ಪ್ರಭಾವಿ ಉಗ್ರಸಂಘಟನೆಗಳು ಒಂದಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಸರ್ಕಾರ ಇತ್ತೀಚಿಗಷ್ಟೆ ದೇಶದ ಜೈಲುಗಳಲ್ಲಿದ್ದ ಕೆಲ ಅಲ್ ಖೈದಾ ಮತ್ತು ಐಸಿಸ್ ಉಗ್ರರನ್ನು ಬಿಡುಗಡೆ ಮಾಡಿತ್ತು. ಈ ಬಗ್ಗೆ ಅಮೆರಿಕ ಆತಂಕಗೊAಡಿದೆ.

ಸಾರಿಗೆ ಚಾಲಕರು-ಕಂಡಕ್ಟರ್‌ಗಳ ಮರು ನೇಮಕಾತಿಗೆ ಆದೇಶ

ಬೆಂಗಳೂರು, ಫೆ. ೧೦: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಕೋರಿ ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಪ್ರತಿಭಟನೆ ವೇಳೆ ಭಾಗಿಯಾಗಿದ್ದ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂದು ೧೦೦ ನೌಕರರು, ನಾಳೆ ೨೦೦ ನೌಕರರ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಕೋರಿ ಮುಷ್ಕರ ನಡೆಸಿದ್ದ ನೌಕರರಲ್ಲಿ ಈಗಾಗಲೇ ೧೫೦೦ ಜನರನ್ನು ಅಮಾನತುಗೊಂಡವರನ್ನು ವಾಪಸ್ ಪಡೆಯಲಾಗಿದೆ. ೧೩೫೩ ಜನರು ವಜಾಗೊಂಡಿದ್ದಾರೆ, ವಜಾಗೊಂಡವರನ್ನು ವಾಪಸ್ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಮಾನವೀಯತೆಯ ದೃಷ್ಟಿಯಿಂದ. ಮರು ನೇಮಕ ಆದೇಶ ನೀಡಲಾಗುತ್ತಿದೆ, ಮೊದಲ ಹಂತದಲ್ಲಿ ೧೦೦ ಜನರಿಗೆ ನೇಮಕ ಮಾಡಲಾಗುತ್ತಿದೆ ಉಳಿದವರಿಗೆ ಹಂತ ಹಂತವಾಗಿ ಮರು ನೇಮಕ ಮಾಡಲಾಗುತ್ತಿದೆ. ಈ ತಿಂಗಳ ಒಳಗೆ ೭೦೦ ಮಂದಿಗೆ ನೇಮಕಾತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು.

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕಳ್ಳ ಸಾಗಣೆ ಯತ್ನ

ಬೆಂಗಳೂರು, ಫೆ. ೧೦: ಉದ್ಯೋಗ ಕೊಡಿಸುವ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ನಗರದಿಂದ ರಾಷ್ಟç ರಾಜಧಾನಿ ದೆಹಲಿಗೆ ಮಾನವ ಕಳ್ಳ ಸಾಗಣೆ ಮಾಡುವ ವ್ಯಕ್ತಿಯೊಬ್ಬನ ಯತ್ನವನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವಿಫಲಗೊಳ್ಳುವಂತೆ ಮಾಡಿದೆ. ಕೋಲಾರ ಗ್ರಾಮಾಂತರ ಪ್ರದೇಶದ ನಿವಾಸಿಯಾಗಿರುವ ಬಾಲಕಿ ೧೦ನೇ ತರಗತಿ ಓದಿದ್ದು, ಈಕೆ ನಾಗೇಶ್ ಎಂಬಾತನ ಬಲೆಗೆ ಬಿದ್ದಿದ್ದಾಳೆ. ಒಳ್ಳೆಯ ಕೆಲಸ ಕೊಡಿಸುವುದಾಗಿ ಬಾಲಕಿಯನ್ನು ನಂಬಿಸಿದ್ದ ಆರೋಪಿ, ಸೋಮವಾರ ಬೆಂಗಳೂರಿಗೆ ಕರೆ ತಂದು ಅತ್ಯಾಚಾರ ಮಾಡಿದ್ದಾನೆ. ನಂತರ ಆಕೆಯನ್ನು ಬಲವಂತವಾಗಿ ದೆಹಲಿಗೆ ಕರೆದುಕೊಂಡು ಹೋಗಲು ಸಂಜೆ ೪.೩೦ರ ಸುಮಾರಿಗೆ ಕೆಂಪೇಗೌಡ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಕರೆತಂದಿದ್ದಾನೆ. ಆರೋಪಿ ಬಾಲಕಿಯನ್ನು ದರಿಯಾಗಂಜ್‌ಗೆ ಮಾನವ ಕಳ್ಳಸಾಗಣೆ ಮಾಡಲು ಯೋಜನೆ ರೂಪಿಸಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ. ವಿಮಾನ ನಿಲ್ದಾಣದಲ್ಲಿ ಬಾಲಕಿ ಭಯಭೀತಳಾಗಿರುವುದನ್ನು ತಪಾಸಣೆ ವೇಳೆ ಸಿಐಎಸ್‌ಎಫ್ ಸಿಬ್ಬಂದಿಗಳು ಗಮನಿಸಿದ್ದಾರೆ. ಈ ವೇಳೆ ಅನುಮಾನಗೊಂಡು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಬಾಲಕಿಯನ್ನು ಪ್ರಶ್ನೆ ಮಾಡಿದ್ದಾರೆ. ಸಮಸ್ಯೆಗಳಿದ್ದರೆ ಹೇಳಿಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ಬಾಲಕಿ ಭಾವುಕಳಾಗಿದ್ದು, ವಿಚಾರವನ್ನು ವಿವರಿಸಿದ್ದಾಳೆ.