ವೀರಾಜಪೇಟೆ, ಫೆ. ೧೦: ಪಕ್ಷ ಸಂಘಟನೆಗೆ ದುಡಿಯುವುದು ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಎಷ್ಟೇ ಬಂದರೂ ಪಕ್ಷದ ಸಿದ್ಧಾಂತದ ಮುಂದೆ ಅವು ಗೌಣವಾಗಬೇಕು ಎಂದು ಕಾಂಗ್ರೆಸ್ ಪ್ರಮುಖ ಎಂದು ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಗಣಪತಿ ಆರ್ಕಿಡ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ನಗರ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಎ.ಎಸ್ ಪೊನ್ನಣ್ಣ, ಕೊಡಗಿನಲ್ಲಿ ವ್ಯಕ್ತಿ ಆಧಾರಿತವಾಗಿ ಪಕ್ಷ ಕಟ್ಟುವುದಕ್ಕಿಂತ ಪಕ್ಷದ ಸಿದ್ಧಾಂತಗಳ ಮೇಲೆ ಪಕ್ಷ ಕಟ್ಟಬೇಕು ಎಂದರು.

ವಿಶೇಷ ಆಹ್ವಾನಿತರಾಗಿದ್ದ ಮಂಥರ್ ಗೌಡ ಮಾತನಾಡುತ್ತಾ, ಕೊಡಗಿನ ರಾಜಕೀಯವೇ ಬೇರೆ, ದೇಶದ ರಾಜಕೀಯವೇ ಬೇರೆ ಎಂದರು.

ನೂತನವಾಗಿ ನಗರ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಅಂತರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ರಿಗೆ ಶುಭ ಹಾರೈಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಒಂದು ಧರ್ಮದ ಪ್ರತಿನಿಧಿಯಾಗಿರುವ ಮೋದಿ, ಜೊತೆಗೆ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕತೆಯನ್ನು ತರುತ್ತಿರುವ ಕುರಿತು ಖೇಧ ವ್ಯಕ್ತಪಡಿಸಿದರು. ಸದಸ್ಯತ್ವಕ್ಕೆ ಪಕ್ಷದಲ್ಲಿ ಹೆಚ್ಚು ಪ್ರೇರೇಪಣೆ ನೀಡುವಂತೆ ಎಂದರು.

ಕಾAಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಜನರ ಜೊತೆಗೆ ಹೆಚ್ಚೆಚ್ಚು ಸಂಪರ್ಕ ಸಭೆಗಳನ್ನು ಬೂತ್ ಮಟ್ಟದಲ್ಲಿ ನಡೆಸಲು ಸಲಹೆ ನೀಡಿದರು.

ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಪಕ್ಷ ಸಂಘಟನೆಗಾಗಿ ಮುಖಂಡರು ಗಳು ಹೇಳಿದ ಮಾತುಗಳನ್ನು ಅಳವಡಿಸಿಕೊಂಡು ಕಾರ್ಯಕರ್ತರು ಕೆಲಸ ಮಾಡಿದ್ದೇ ಆದಲ್ಲಿ ಪಕ್ಷದ ಬಲ ಸಂವರ್ಧನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿದರು.

ಕಾಂಗ್ರೆಸ್ ಧ್ವಜವನ್ನು ಗಣ್ಯರು ನೀಡುವ ಮೂಲಕ ವೀರಾಜಪೇಟೆ ನೂತನ ನಗರಾಧ್ಯಕ್ಷರಾಗಿ ಆಯ್ಕೆಯಾದ ಮಾದಂಡ ತಿಮ್ಮಯ್ಯರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.

ಬಳಿಕ ಮಾತನಾಡಿದ ಮಾದಂಡ ತಿಮ್ಮಯ್ಯ ಕ್ರೀಡೆಯನ್ನು ಆಡುವಾಗ ಜಾತಿ, ಮತ ಬೇಧ ನೋಡದೇ ದೇಶಕ್ಕಾಗಿ ಆಡುತ್ತೇವೆ. ಹಾಗೆಯೇ ಯಾವುದೇ ಜಾತಿ, ಮತ ಬೇಧ ನೋಡದೇ ಎಲ್ಲರನ್ನು ಒಂದಾಗಿ ಕಾಣುವ ಕಾಂಗ್ರೆಸ್ ಪಕ್ಷದಲ್ಲಿ ಏನೇ ಸಮಸ್ಯೆ ಬಂದರೂ ಜೊತೆಗೆ ನಿಲ್ಲುತ್ತೇವೆ ಎಂದರು. ಕೆಪಿಸಿಸಿಯ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾದ ಲೋಹಿತ್ ಗೌಡರನ್ನು ಈ ಸಂದರ್ಭ ಯೂತ್ ಕಾಂಗ್ರೆಸ್ ವತಿಯಿಂದ ಹಾಗೂ ಕಾಂಗ್ರೆಸ್ ನಗರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ನಗರ ಕಾಂಗ್ರೆಸ್ ಕಾರ್ಯದರ್ಶಿ ಶಶಿಧರ್ ನಿರೂಪಿಸಿದರು. ಮಹಿಳಾ ಬ್ಲಾಕ್ ಅಧ್ಯಕ್ಷೆ ಪೊನ್ನಕ್ಕಿ ಪ್ರಾರ್ಥಿಸಿದರು. ಹಮೀದ್ ಹಾಗೂ ದಿನೇಶ್ ಅವರನ್ನು ಉಪಾಧ್ಯಕ್ಷರು ಮತ್ತು ಖಜಾಂಚಿಯನ್ನಾಗಿ ನೂತನ ನಗರಾಧ್ಯಕ್ಷ ಮಾದಂಡ ತಿಮ್ಮಯ್ಯ ಘೋಷಿಸಿದರು.

ಹಿರಿಯ ಮುಖಂಡರುಗಳಾದ ವಕೀಲ ಪಿ.ಜಿ. ಅಯ್ಯಪ್ಪ, ಎಂ.ಎಸ್. ಪೂವಯ್ಯ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಸಿ.ಕೆ. ಪೃಥ್ವಿನಾಥ್, ಮೊಹಮ್ಮದ್ ರಾಫಿ, ಅಗಸ್ಟಿನ್ ಬೆನ್ನಿ, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.