ಮಡಿಕೇರಿ, ಫೆ. 11: ದೇಶ ಸೇವೆ ಮಾಡಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಜಿ ಸೈನಿಕರಿಗೆ ನ್ಯಾಯಯುತವಾಗಿ ಸರಕಾರದ ಸೌಲಭ್ಯಗಳು ದೊರಕುತ್ತಿಲ್ಲವೆಂದು ಆರೋಪಿಸಿರುವ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ; ಸೌಲಭ್ಯ ಒದಗಿಸಿಕೊಡದಿದ್ದಲ್ಲಿ ಹೋರಾಟದ ಹಾದಿ ಹಿಡಿಯ ಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಕೊಡಗು ಘಟಕದ ಅಧ್ಯಕ್ಷ ಕೆ.ಪಿ. ಸೋಮಣ್ಣ, ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ನಿಯಮಾನುಸಾರ ಐದು ಎಕರೆ ಜಾಗ ಸರಕಾರ ಮಂಜೂರು ಮಾಡಿಕೊಡಬೇಕು. ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಾಜಿ ಸೈನಿಕರಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಅವಲಂಬಿತರಿದ್ದಾರೆ. ಅಂದಾಜು ಐದು ಸಾವಿರದಷ್ಟು ಅರ್ಜಿಗಳು ಜಾಗಕ್ಕಾಗಿ ಸಲ್ಲಿಕೆಯಾಗಿದ್ದು, ಇದುವರೆಗೂ ಮಂಜೂರಾಗಿರುವದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದುಕೊಂಡು ಪರಿಶೀಲಿಸಿದಾಗ 2000ದಿಂದ 2021ರವರೆಗೆ 21 ವರ್ಷಗಳ ಅವಧಿಯಲ್ಲಿ 8 ಮಂದಿಗೆ ಮಡಿಕೇರಿ, ಫೆ. 11: ದೇಶ ಸೇವೆ ಮಾಡಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಜಿ ಸೈನಿಕರಿಗೆ ನ್ಯಾಯಯುತವಾಗಿ ಸರಕಾರದ ಸೌಲಭ್ಯಗಳು ದೊರಕುತ್ತಿಲ್ಲವೆಂದು ಆರೋಪಿಸಿರುವ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ; ಸೌಲಭ್ಯ ಒದಗಿಸಿಕೊಡದಿದ್ದಲ್ಲಿ ಹೋರಾಟದ ಹಾದಿ ಹಿಡಿಯ ಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಕೊಡಗು ಘಟಕದ ಅಧ್ಯಕ್ಷ ಕೆ.ಪಿ. ಸೋಮಣ್ಣ, ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ನಿಯಮಾನುಸಾರ ಐದು ಎಕರೆ ಜಾಗ ಸರಕಾರ ಮಂಜೂರು ಮಾಡಿಕೊಡಬೇಕು. ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಾಜಿ ಸೈನಿಕರಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಅವಲಂಬಿತರಿದ್ದಾರೆ. ಅಂದಾಜು ಐದು ಸಾವಿರದಷ್ಟು ಅರ್ಜಿಗಳು ಜಾಗಕ್ಕಾಗಿ ಸಲ್ಲಿಕೆಯಾಗಿದ್ದು, ಇದುವರೆಗೂ ಮಂಜೂರಾಗಿರುವದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದುಕೊಂಡು ಪರಿಶೀಲಿಸಿದಾಗ 2000ದಿಂದ 2021ರವರೆಗೆ 21 ವರ್ಷಗಳ ಅವಧಿಯಲ್ಲಿ 8 ಮಂದಿಗೆ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಅವರುಗಳಿಗೆ ಜಮೀನಿನ ಖಾತೆ ಮಾಡಿ ಕೊಡಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಿದ್ದಾರೆ. ಆದರೆ, ಕಾರ್ಯಕ್ರಮ, ಸಮಾರಂಭಗಳನ್ನು ಹಮ್ಮಿಕೊಳ್ಳಲು ಪೆನ್ಷನ್ ಹಣದಲ್ಲಿ ಬಾಡಿಗೆ ನೀಡಲು ಕಷ್ಟಕರವಾಗುತ್ತದೆ. ಇ ಹಿನ್ನೆಲೆಯಲ್ಲಿ ಸೈನಿಕರ ಭವನ ಒದಗಿಸಿಕೊಡಬೇಕು. ಸರಕಾರದ ಆದೇಶದಂತೆ ಮಾಜಿ ಸೈನಿಕರಿಗೆ ಹಾಗೂ ಅವಲಂಬಿತ ವಯೋ ವೃದ್ಧರಿಗೆ ಸರಕಾರಿ ಕಚೇರಿಗಳಲ್ಲಿ ಆದ್ಯತೆ ಮೇಲೆ ಕೆಲಸ ನೀಡಬೇಕೆಂದಿದ್ದರೂ ಅವರನ್ನು ಗಣನೆಗೆ ತೆಗೆದುಕೊಳ್ಳದೆ ಸತಾಯಿಸಲಾಗುತ್ತಿದೆ. ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾ ಸೈಜಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಮಾಜಿ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಮಾಜಿ ಸೈನಿಕರು ಮೃತಪಟ್ಟರೆ ಸೈನಿಕ ಇಲಾಖೆ ವತಿಯಿಂದ ಯಾರಾದರು ತೆರಳಿ ಸರಕಾರಿ ಗೌರವ ಸಲ್ಲಿಸಬೇಕು. ಆದರೆ ಇಲಾಖೆ ಅದನ್ನು ಮಾಡುತ್ತಿಲ್ಲ, ಮಾಜಿ ಸೈನಿಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

ಹೋರಾಟ ಎಚ್ಚರಿಕೆ

ಸಂಘದ ಉಪಾಧ್ಯಕ್ಷ ಸುಧೀರ್ ಮಾತನಾಡಿ, ಜ.26 ಹಾಗೂ ಆ.15ರಂದು ಮಾತ್ರ ಸರಕಾರಕ್ಕೆ ಜನಪ್ರತಿನಿಧಿಗಳಿಗೆ ಸೈನಿಕರ ನೆನಪಾಗುತ್ತದೆ. ನಂತರ ಮರೆತು ಬಿಡುತ್ತಾರೆ. ಸೈನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಕಚೇರಿಗೆ ಹೋದರೆ ಸತಾಯಿಸಲಾಗುತ್ತಿದೆ ಎಂದು ಹೇಳಿದರು. ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು, ಅವರ ಅಹವಾಲುಗಳನ್ನು ಸ್ವೀಕಾರ ಮಾಡಬೇಕು ಎಂದು ಒತ್ತಾಯಿಸಿದ ಅವರು;

(ಮೊದಲ ಪುಟದಿಂದ) ಸಾವಿರಗಟ್ಟಲೆ ಆಸ್ತಿ ಇದ್ದವರು ಸರಕಾರಿ ಜಾಗ ಒತ್ತುವರಿ ಮಾಡಿಕೊಂಡಿರುತ್ತಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಅಂತಹವರಿಗೆ ಸಹಕಾರ ನೀಡುತ್ತಾರೆ. ಆದರೆ, ಮಾಜಿ ಸೈನಿಕರಿಗೆ ಕೊಡಲು ಇವರಲ್ಲಿ ಜಾಗವಿಲ್ಲ, ಒಂದೆರಡು ಎಕರೆ ಜಾಗಕ್ಕೆ ಖಾತೆ ಮಾಡಿಕೊಡಲು ಸತಾಯಿಸುತ್ತಾರೆ ಎಂದು ಆರೋಪಿಸಿದರು. ಸೈನಿಕರಿಗೆ ನಿವೃತ್ತರಾದ ಮೇಲೆಯೂ ಗೌರವವಿದೆ. ಮಾಜಿ ಸೈನಿಕರು ಮೃತಪಟ್ಟರೆ ಇಲಾಖೆ ಸರಕಾರಿ ಗೌರವ ಸಲ್ಲಿಸಬೇಕು. ಇದರಿಂದ ಶವ ಸಂಸ್ಕಾರಕ್ಕೆ ಬರುವ ಯುವಕರಿಗೆ ಸೇನೆಗೆ ಸೇರಲು ಪ್ರೇರಣೆಯಾಗಲಿದೆ. ಆದರೆ ಇಲಾಖೆ ಅದನ್ನು ಮಾಡುತ್ತಿಲ್ಲ, ಈ ಬಗ್ಗೆ ಪ್ರಶ್ನಿಸಿದರೆ ಸಾವನ್ನಪ್ಪಿದವರ ಕುಟುಂಬಕ್ಕೆ ಪತ್ರ ಬರೆಯುತ್ತಿರುವದಾಗಿ ಉತ್ತರಿಸುತ್ತಾರೆ. ಇದರಿಂದಾಗಿ ಸೇನೆಗೆ ಸೇರುವವರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ; ಇದು ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ಸೈನಿಕರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಸೈನಿಕ ಅದಾಲತ್ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸೈನಿಕರ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದೆಂದು ಹೇಳಿದರು.

ಬಿಪಿಎಲ್ ಕಾರ್ಡ್ ನೀಡಲಿ

ಸಂಘಟನಾ ಕಾರ್ಯದರ್ಶಿ ಲವ ಕುಟ್ಟಂಡ ಮಾತನಾಡಿ, ಸರಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಮಾಜಿ ಸೈನಿಕರೆಲ್ಲರೂ ಒಗ್ಗಟ್ಟಾಗಿ ಒಂದೇ ವೇದಿಕೆಯಡಿ ಗಟ್ಟಿಯಾಗಿ ನಿಂತರೆ ಸರಕಾರವೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ, ನಮಗೆ ಸಿಗಬೇಕಾದ ಸೌಲಭ್ಯ ಸಿಗುತ್ತದೆ ಎಂದು ಹೇಳಿದರು. ಮಾಜಿ ಸೈನಿಕರ ವಿಧವಾ ಪತ್ನಿಯರಿಗೆ ಯಾವದೇ ಸೌಲಭ್ಯಗಳು ಸಿಗುತ್ತಿಲ್ಲ. ಪಿಂಚಣಿಯಲ್ಲಿ ಬದುಕು ಸಾಗಿಸುವದು ಕಷ್ಟ, ಹಾಗಾಗಿ ಅಂತಹವರಿಗೆ ಬಿಪಿಎಲ್ ಪಡಿತರ ಚೀಟಿ ನೀಡುವಂತಾಗಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಂಚಾಲಕ ಪಿ.ಸಿ.ವಾಸು, ಕಾರ್ಯದರ್ಶಿ ಪ್ರವೀಣ್‍ಕುಮಾರ್, ಸಂಚಾಲಕಿ ಎಂ.ಪಿ.ಬವಾನಿ ಇದ್ದರು.