ಕುಶಾಲನಗರ, ಫೆ. 11: ಬನವಾಸಿ ಕನ್ನಡಿಗರು ಮತ್ತು ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಯು.ಎಸ್.ಟಿ. ಗ್ಲೋಬಲ್ ಸಂಸ್ಥೆಯ ವತಿಯಿಂದ ಕೊಡಗಿನ ಆನೆ ಮಾವುತರು, ಕಾವಾಡಿಗರು ಹಾಗೂ ಆದಿವಾಸಿಗಳ ನೂರು ಕುಟುಂಬಗಳಿಗೆ, ಸುಮಾರು ಒಂದು ತಿಂಗಳಿಗೆ ಬೇಕಾಗುವ ದವಸ ಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಯಿತು.

ದುಬಾರೆ ಆನೆ ಕ್ಯಾಂಪಿನ 60 ಕುಟುಂಬಗಳಿಗೆ, ಮಾಲ್ದಾರೆಯ 5 ಕುಟುಂಬಗಳಿಗೆ, ರಾಣಿ ಗೇಟ್ ಹಾಡಿಯ 6 ಕುಟುಂಬ ಮತ್ತು ಹರವೆಯ 10 ಹಾಗೂ ಮುತ್ತೂರಿನ 19 ಕುಟುಂಬಗಳಿಗೆ ತಂಡದ ಜೈಕಿರಣ್, ಕಿರಣ್ಮಯಿ ಶರ್ಮ ಮತ್ತು ಶಮಂತ್ ಹಾಗೂ ನೌಶಾದ್ ಜನ್ನತ್ತ್, ಮೋಹನ್, ರೋಷನ್ ನೇತೃತ್ವದಲ್ಲಿ ನೀಡಲಾಯಿತು.