ಕೂಡಿಗೆ, ಫೆ. 11: ರಾಷ್ಟ್ರೀಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮತ್ತು ಓಡಿಪಿ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಗ್ರಾಮಮಟ್ಟದ ಜಾಗೃತಿ ಕಾರ್ಯಕ್ರಮ ಮುಳ್ಳುಸೋಗೆ ಅಂಬೇಡ್ಕರ್ ಸಮುದಾಯದ ಭವನದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನರ್ಬಾಡ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ವ್ಯವಸ್ಥಾಪಕ ರಮೇಶ್ ಬಾಬು ನೆರವೇರಿಸಿ ಮಾತನಾಡಿ, ದೇಶದಲ್ಲಿ ರೈತರಿಗೆ ಕೃಷಿ ಮತ್ತು ಇತರ ಸಾಲ ಸೌಲಭ್ಯಗಳ ಯೋಜನೆಯಿದ್ದು, ಅದರ ಮುಖೇನ ಯೋಜನೆಗಳ ಪ್ರಯೋಜನವನ್ನು ಪಡೆದು ಸ್ವಾವಲಂಬಿಯಾಗಿ ರೈತರು ಬದುಕಬೇಕೆಂದರು.ಕಾರ್ಮಿಕ ಇಲಾಖೆ ಹಿರಿಯ ನಿರೀಕ್ಷಕಿ ಲೀನಾ ಕಟ್ಟಡ ಕಾರ್ಮಿಕರಿಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ವಹಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಜಿಲ್ಲಾ ವಲಯ ಸಂಯೋಜಕರಾದ ಜೋಯ್ಸ್ ಮೆನೆಜಸ್, ಒಕ್ಕೂಟದ ಅಧ್ಯಕ್ಷೆ ಜ್ಯೋತಿ, ಯೂನಿಯನ್ ಬ್ಯಾಂಕ್‍ನ ಎಫ್‍ಎನ್‍ಸಿ ಹಿಂದುಮತಿ, ಸಿ.ಎಸ್. ಅಕ್ಷಯ್, ಕಾರ್ಯಕರ್ತೆ ಮಮತ, ಜಯಂತಿ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.