ಗೋಣಿಕೊಪ್ಪ ವರದಿ, ಫೆ. ೯: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ಐಚೇಟ್ಟೀರ ಗಂಗಮ್ಮ ಮುದ್ದಪ್ಪ ವಿದ್ಯಾನಿಧಿ ಪ್ರೋತ್ಸಾಹ ಧನವನ್ನು ವಿತರಣೆ ಮಾಡಲಾಯಿತು. ೧ ರಿಂದ ೭ ತರಗತಿವರೆಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ತನ್ಸಾ ಫಾತಿಮಾ, ಪಿ.ವಿ. ಕೌಶಿಕ್, ವೈ.ಎಂ. ಕಾವ್ಯ, ಕೆ.ಎ. ಮಹಮ್ಮದ್ ಅಪ್ಸಲ್, ಪಿ.ವಿ. ಕುಶಿಲ್, ವೈ.ಈ. ನಂದಿನಿ, ಮಹಮ್ಮದ್ ಸಿನಾನ್, ಎಂ.ಜಿ. ಫಿದಾ ಫಾತಿಮ, ಪಿ. ಮಂಜುಶ್ರೀ, ಪಿ.ಜೆ. ಕ್ಯಾರೊಲಿನ್ ಪಡೆದುಕೊಂಡರು.
ಮುಖ್ಯ ಶಿಕ್ಷಕಿ ಎಂ.ಎ. ಸೋಫಿಯ, ಹಳೆಯ ವಿದ್ಯಾರ್ಥಿಗಳಾದ ಕಾಳಪಂಡ ಟಿ. ಬಿದ್ದಪ್ಪ, ಶ್ರೀಧರ್ ಇದ್ದರು.