ಗೋಣಿಕೊಪ್ಪಲು.ಫೆ.೯: ಪ್ರೇರಣಾ ಬಳಗದ ವತಿಯಿಂದ ನಗರದ ಮಹಿಳಾ ಸಮಾಜದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ೬೭ ಮಂದಿ ನೇತ್ರದಾನ ಮಾಡಲು ನೋಂದಾವಣೆ ಮಾಡಿಕೊಂಡಿದ್ದಾರೆ.ಅಲ್ಲದೇ ೨೫ ಮಂದಿ ದೇಹದಾನ ಮಾಡಲು ಇಚ್ಚೆ ವ್ಯಕ್ತಪಡಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೇರಣ ಬಳಗದ ಅಧ್ಯಕ್ಷೆ ಕೊಣಿಯಂಡ ಕಾವ್ಯಾ ಸಂಜು ಮಾತನಾಡಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಬಳಗವು ಉತ್ತಮ ರೀತಿಯಲ್ಲಿ ಸಾಗುತ್ತಿದೆ.

ಅನೇಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣ ಕಾರ್ಯಕ್ರಮ ಯಶಸ್ವಿಯಾಗಲು ಕಾರಣ ಎಂದ ಅವರು ಕೊಡಗು ಜಿಲ್ಲೆಯ ಶಿಬಿರವೊಂದರಲ್ಲಿ ೬೭ ಮಂದಿ ನೇತ್ರದಾನ ಮಾಡುವದಾಗಿ ಹೆಸರು ನೋಂದಾವಣೆ ಮಾಡಿರುವದು ಇದೇ ಪ್ರಥಮ ಎಂದರು. ಅಂಗದಾನ ಹಾಗೂ ನೇತ್ರದಾನದ ಬಗ್ಗೆ ಜಿಲ್ಲಾ ಆಸ್ಪತ್ರೆಯ ಹಲವು ವೈದ್ಯರು ಉಪಯುಕ್ತ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಚೆರಿಯಪಂಡ ಲತಾ ಪೂಣಚ್ಚ, ಕಾರ್ಯದರ್ಶಿ ಪಾರುವಂಗಡ ರಿಸ್ತಾ ಚಂಗಪ್ಪ, ಯೋಜನಾ ನಿರ್ದೇಶಕರಾದ ಮಂಡAಗಡ ಪುನಿತಾ ದಿನ್ಸು, ಕೊಕ್ಕೆಂಗಡ ರಾಣಿ ಸುಬ್ರಹ್ಮಣಿ,ಉಮೇಶ್ ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.