ಮಡಿಕೇರಿ, ಫೆ. ೯: ಮಡಿಕೇರಿಯ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯ ಆರೋಗ್ಯ ಚಿಕಿತ್ಸೆಗಾಗಿ ಇನ್ನರ್ ವೀಲ್ ಸಂಸ್ಥೆಯಿAದ ೧೫ ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಯಿತು.
ಸಕ್ಕರೆ ಕಾಯಿಲೆಯಿಂದ ಎಳೆವಯಸ್ಸಿನಲ್ಲಿಯೇ ಬಳಲುತ್ತಿರುವ ೪ನೇ ತರಗತಿಯ ವಿದ್ಯಾರ್ಥಿನಿಯು ಜೀವನಪರ್ಯಂತ ಇನ್ಸುಲಿನ್ ಇಂಜಕ್ಷನ್ ಪಡೆಯಬೇಕಾಗಿದ್ದು, ಪೋಷಕರಿಗೆ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಇನ್ನರ್ ವೀಲ್ ಸಹಾಯ ಹಸ್ತ ಚಾಚಿತು ಎಂದು ಇನ್ನರ್ ವೀಲ್ ಅಧ್ಯಕ್ಷೆ ಶಫಾಲಿ ರೈ ತಿಳಿಸಿದರು.
ಇನ್ನರ್ ವೀಲ್ ಕಾರ್ಯದರ್ಶಿ ಶಮ್ಮಿ ಪ್ರಭು, ಪ್ರಮುಖರಾದ ಪ್ರಿಯಾ ಪ್ರಶಾಂತ್, ರೂಪಸುಮಂತ್, ನಮಿತಾ ರೈ, ಡಾ. ರೇಣುಕಾ ಸುಧಾಕರ್ ಹಾಜರಿದ್ದರು.