ಮಡಿಕೇರಿ, ಫೆ. ೯: ಭಾರತ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅನ್ನಪೂರ್ಣೇಶ್ವರಿ ಯುವತಿ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಮೂರ್ನಾಡಿನಲ್ಲಿ ವೃತ್ತಿಪರ ಕೌಶಲ್ಯಾಧಾರಿತ ಶಿಕ್ಷಣ ಜಾಗೃತಿ ಕಾರ್ಯಕ್ರಮದಡಿಯಲ್ಲಿ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಕಾರ್ಯಕ್ರಮದಲ್ಲಿ ತರಬೇತಿ ಶಿಕ್ಷಕಿ ರಾಜೇಶ್ವರಿ ಹಾಜರಿದ್ದರು. ತರಬೇತಿ ಕೇಂದ್ರದ ಭವ್ಯ ತರಬೇತಿ ಪ್ರಾರಂಭ ಮಾಡಿ ಇದರ ಪ್ರಯೋಜನ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ತಿಳಿಸಿ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು. ಚಂದ್ರಶೇಖರ, ಯುವತಿ ಮಂಡಳಿ ಸದಸ್ಯರು ಹಾಜರಿದ್ದರು. ಭವ್ಯ ಸ್ವಾಗತಿಸಿ, ಪೂರ್ಣಚಂದ್ರ ವಂದಿಸಿದರು.