ಕಣಿವೆ, ಫೆ. ೯ : ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಸಭೆ ನಡೆಯಿತು. ಪಕ್ಷದ ಮುಖಂಡ ನಾಪಂಡ ಮುತ್ತಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ತಾಲೂಕಿನ ೧೮ ಗ್ರಾಮ ಪಂಚಾಯಿತಿಗಳಲ್ಲಿ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸಿ ಸಮಿತಿ ರಚಿಸುವ ಬಗ್ಗೆ ತೀರ್ಮಾನಿಸಿತು. ಹಾಗೆಯೇ ಮುಂಬರುವ ತಾ. ಪಂ. ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು.

ಬೇರೆ ಬೇರೆ ಪಕ್ಷಗಳಲ್ಲಿನ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರಲು ಬಯಸಿರುವುದರಿಂದ ಕೂಡಲೇ ದಿನವನ್ನು ನಿಗದಿಗೊಳಿಸಿ ಪಕ್ಷದ ಬೃಹತ್ ಸಭೆ ಏರ್ಪಡಿಸಿ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ಈ ಸಂದರ್ಭ ಕುಶಾಲನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಡಿ.ರವಿಕುಮಾರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜು, ಪಕ್ಷದ ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲಗೌಡ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಪಕ್ಷದ ವಿವಿಧ ಘಟಕಗಳ ಪ್ರಮುಖರಾದ ಕೂಡಿಗೆ ರಾಜೇಗೌಡ, ರಾಮಚಂದ್ರ, ಶೇಖರ್ ಶಂಕರಾಚಾರಿ, ಸೋಮವಾರಪೇಟೆಯ ಸ್ವಾಗತ್ ಕುಶಾಲಪ್ಪ, ಆದರ್ಶ್ ತಮ್ಮಯ್ಯ, ಕುಶಾಲನಗರದ ಎಚ್.ಡಿ.ಚಂದ್ರು ಮೊದಲಾದವರಿದ್ದರು.