ಮಡಿಕೇರಿ, ಫೆ. ೧೦: ಕೊಡಗು ಜಿಲ್ಲೆಯಲ್ಲಿ ಪೌತಿ ಖಾತೆ ಬದಲಾವಣೆ-ಆರ್‌ಟಿಸಿಯಲ್ಲಿ ಪಟ್ಟೆದಾರ ಮತ್ತು ಅವರ ಕುಟುಂಬಸ್ಥರ ಹೆಸರು ನಮೂದಿಸುವ ಸಂಬAಧ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅಧ್ಯಕ್ಷತೆಯಲ್ಲಿ ವಿವಿಧ ಸಂಘ-ಸAಸ್ಥೆಗಳ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸುವ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜಮಾಬಂದಿ ವಹಿ ಚಾಲ್ತಿಯಲ್ಲಿತ್ತು, ೨೦೦೦ ಇಸವಿಯಿಂದ ಆರ್‌ಟಿಸಿ ಚಾಲ್ತಿಗೆ ಬಂದ ನಂತರ ಪಟ್ಟೆದಾರಿಕೆ ಹಾಗೂ ಪೌತಿ ವಾರಸುದಾರರ ಬದಲಾವಣೆ ವಿಷಯದಲ್ಲಿ ಗೊಂದಲ ಹಾಗೂ ಸಮಸ್ಯೆಗಳ ಬಗ್ಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಳಕು ಚೆಲ್ಲಿದ್ದು, ಆ ದಿಸೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವಂತೆ ಕೋರಿದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಶೇ. ೬೦ ರಿಂದ ೭೦ ರಷ್ಟು ಭೂಮಿ ಪಟ್ಟೆದಾರರ ಹೆಸರಿನಲ್ಲಿದೆ. ನಮೂನೆ ೬ ರಲ್ಲಿ ಹಿಡುವಳಿದಾರರ ಹೆಸರು ಇರುತ್ತದೆ. ಆದರೆ ಪಟ್ಟೆದಾರರು ತೀರಿಕೊಂಡಿದ್ದಲ್ಲಿ ಪಟ್ಟೆದಾರರ ಹೆಸರನ್ನು ತೆಗೆದುಹಾಕಿ ಹಿಡುವಳಿದಾರರ ಹೆಸರನ್ನು ಸೇರ್ಪಡೆ ಮಾಡಬೇಕು. ಸ್ಥಳೀಯವಾಗಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷರು ಸ್ಥಳ ಪರಿಶೀಲನೆ ಮಾಡಬೇಕು. ಭೂಮಿಗೆ ಕಂದಾಯ ನಿಗದಿ ಮಾಡಬೇಕು ಎಂದು ಸಲಹೆ ನೀಡಿದರು.

ಸಣ್ಣ ಬೆಳೆಗಾರರಾದ ಪ್ರದೀಪ್ ಪೂವಯ್ಯ ಮಾತನಾಡಿ, ಭೂಮಿ ಹಕ್ಕು ಸಂಬAಧಿಸಿದAತೆ ಇಡೀ ಭಾರತದಲ್ಲಿಯೇ ಇಲ್ಲದಿರುವುದು ಕೊಡಗು ಜಿಲ್ಲೆಯಲ್ಲಿದೆ. ಹಿಂದೆ ಜಮಾಬಂದಿ ಇತ್ತು, ನಂತರ ಆರ್‌ಟಿಸಿ ಆಯಿತು. ಕೃಷಿಕರಿಗೆ ಹಿಡುವಳಿ ಭೂಮಿಯ ಆರ್‌ಟಿಸಿ ದೊರೆತು ಸಾಲ ಸೌಲಭ್ಯ ಪಡೆಯಲು ಸಹಕರಿಸಬೇಕು. ಜಿಲ್ಲೆಯಲ್ಲಿ ಕಂದಾಯ ಅದಾಲತ್ ನಡೆಯಬೇಕು. ಮೂರು ಉಪ ವಿಭಾಗ ಮಾಡಿ ಉಪ ವಿಭಾಗಾಧಿಕಾರಿ ಅವರನ್ನು ನಿಯೋಜಿಸಬೇಕು ಎಂದು ಅವರು ಸಲಹೆ ಮಾಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇರುತ್ತದೆ. ಪಟ್ಟೆದಾರರು ತೀರಿಕೊಂಡ ನಂತರ ಕುಟುಂಬದವರು ಸಭೆ ಮಾಡಿ ಹಿರಿಯರನ್ನು ಪಟ್ಟೆದಾರರನ್ನಾಗಿ ಮಾಡಿಕೊಳ್ಳಬೇಕು. ಆದರೆ ಈ ಕೆಲಸ ಜಿಲ್ಲೆಯಲ್ಲಿ ಆಗುತ್ತಿಲ್ಲ. ಕುಟುಂಬದ ಸಮಸ್ಯೆಗಳಿಂದಾಗಿ ಗೊಂದಲವಿದೆ ಎಂದು ಬಾಂಡ್ ಗಣಪತಿ ಅವರು ಹೇಳಿದರು.

ಕಾಫಿ ಬೆಳೆಗಾರರಾದ ನಂದ ಸುಬ್ಬಯ್ಯ ಮಾತನಾಡಿ, ಭೂ ಕಂದಾಯ ಕಾಯ್ದೆ ಜಾರಿಯಾದ ನಂತರ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇರಬಹುದೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ವಿಶ್ವನಾಥ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಪಟ್ಟೆದಾರರ ಹೆಸರು ಅಗತ್ಯವಿಲ್ಲ. ಖಾಲಿ ಜಮೀನಿಗೂ ಕಂದಾಯ ನಿಗದಿ ಮಾಡಬೇಕಿರುವುದರಿಂದ ಖುಷ್ಕಿ ಕಂದಾಯ ಹಾಗೂ ಪ್ರತಿ ಜಾಗಕ್ಕೂ ಕಂದಾಯ ನಿಗದಿ ಮಾಡಬೇಕು. ಜಿಲ್ಲೆಯಲ್ಲಿ ಕಂದಾಯಕ್ಕೆ ಒಳಪಡದ ಭೂಮಿ ಎಷ್ಟು ಎಕರೆ ಇದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಭೂಮಿಗೆ ಸಂಬAಧಿಸಿದAತೆ ಏಕಗವಾಕ್ಷಿ ಪದ್ಧತಿ ಜಾರಿಯಾಗಬೇಕು ಎಂದು ಅವರು ಕೋರಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಪೌತಿ ಖಾತೆ ಬದಲಾವಣೆ, ಆರ್‌ಟಿಸಿ ಪಟ್ಟೆದಾರ/ ಕುಟುಂಬಸ್ಥರ ಹೆಸರು ನಮೂದಿಸುವ ಸಂಬAಧ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಬೇಕು.

ಪಟ್ಟೆದಾರರ ಕುಟುಂಬದವರ ಅಭಿಪ್ರಾಯ ಪಡೆದು ಹಿರಿಯರನ್ನು ಪಟ್ಟೆದಾರರನ್ನಾಗಿ ಮಾಡಬೇಕು ಎಂದು ಹೇಳಿದರು.

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ, ಸರ್ಕಾರಿ ವಕೀಲ ಕವೀಂದ್ರ, ಕೊಡಗು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ಹಿರಿಯ ವಕೀಲ ಕೃಷ್ಣಭಟ್ ಮಾತನಾಡಿದರು.

ಪ್ರಮುಖರಾದ ಐಯಣ್ಣ, ಗಣಪತಿ, ಇತರರು ಹಲವು ಸಲಹೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜುಮೊಗವೀರ, ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಭೂ ದಾಖಲೆಗಳ ಉಪ ನಿರ್ದೇಶಕ ಪಿ. ಶ್ರೀನಿವಾಸ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್, ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ್, ಸಹಕಾರ ಇಲಾಖೆಯ ಉಪ ನಿಬಂಧಕ ಸಲೀಮ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ತಹಶೀಲ್ದಾರ್ ಮಹೇಶ್ ಅವರು ಇದ್ದರು.

ಗುಡುಗಳಲೆ ಜಾತ್ರಾ ಮಹೋತ್ಸವ