ಮಡಿಕೇರಿ, ಫೆ. ೯: ವಿಧಾನಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ತಮ್ಮ ಅನುದಾನದಲ್ಲಿ ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಪರಿಶೀಲನೆ ನಡೆಸಿದರು. ಅಲ್ಲಿನ ಮಹಾವಿಷ್ಣು ದೇವಾಲಯ ರಸ್ತೆ ಮೂಲಕ ಸ್ಥಳೀಯ ಕಾಲೋನಿಗೆ ತೆರಳುವ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಅವರು ಅನುದಾನ ಕಲ್ಪಿಸಿದ್ದಾರೆ. ಇವರ ಭೇಟಿ ಸಂದರ್ಭ ಡಿ.ಸಿ.ಸಿ. ಸದಸ್ಯರಾದ ಪೋರೆರ ಬಿದ್ದಪ್ಪ ನಡಿಕೇರಿಯಂಡ ಮಹೇಶ್, ಗ್ರಾ.ಪಂ. ಸದಸ್ಯೆ ಶಾರದಾ, ನಾಣಮಂಡ ಮಾಚಯ್ಯ, ಸವಿತಾ, ಬೊಳ್ಳಜೀರ ಬೋಪಯ್ಯ ಮತ್ತಿತರರು ಹಾಜರಿದ್ದರು.