ಮಡಿಕೇರಿ, ಫೆ. ೯: ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ ತಾ. ೧೦ರಂದು (ಇಂದು) ಪ್ರೆಸ್ ಕ್ಲಬ್ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗೆ ಗೀತಾ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.

ಮಧ್ಯಾಹ್ನ ೩.೩೦ ಗಂಟೆಗೆ ಗಾಯನ ಸ್ಪರ್ಧೆ ನಡೆಯಲಿದೆ. ಕ್ಲಬ್ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸದಸ್ಯರ ವಿಭಾಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಒಂದು ಚಿತ್ರಗೀತೆ ಹಾಗೂ ಒಂದು ಭಾವಗೀತೆ, ಜಾನಪದ ಗೀತೆ ಹಾಡಬೇಕು. ಸದಸ್ಯರ ಮಕ್ಕಳ ವಿಭಾಗದಲ್ಲಿ ಒಂದು ಚಿತ್ರ ಗೀತೆ ಹಾಡಬೇಕೆಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್‌ಕುಮಾರ್ ಗುಹ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.