ಮಡಿಕೇರಿ, ಫೆ. ೯: ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರ ನೂತನ ಕಚೇರಿ ಜಿ.ಪಂ. ಭವನದಲ್ಲಿ ಪ್ರಾರಂಭಗೊAಡಿದೆ. ತಾ. ೭ರಂದು ಬೆಳಿಗ್ಗೆ ನೂತನ ಕಚೇರಿಯನ್ನು ಪೂಜೆಯ ಮೂಲಕ ಪ್ರಾರಂಭಿಸಲಾಯಿತು. ಈ ಸಂದರ್ಭ ಸುಜಾ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾಪೂವಯ್ಯ ಸೇರಿದಂತೆ ಬಿಜೆಪಿಯ ಪ್ರಮುಖರು ಪಾಲ್ಗೊಂಡಿದ್ದರು. ಪ್ರತಿ ಶುಕ್ರವಾರದಂದು ಬೆಳಿಗ್ಗೆ ೧೧ ರಿಂದ ಕಚೇರಿಯಲ್ಲಿ ಸದಸ್ಯರು ಲಭ್ಯರಿರುತ್ತಾರೆ ಎಂದು ಆಪ್ತ ಕಾರ್ಯದರ್ಶಿ ಹೇಮಂತ್ ತಿಳಿಸಿದ್ದಾರೆ.