*ಗೋಣಿಕೊಪ್ಪಲು, ಫೆ. ೯: ಇಲ್ಲಿನ ಸೆಸ್ಕ್ ಉಪ ವಿಭಾಗಕ್ಕೆ ಸೇರಿದ ಗೋಣಿಕೊಪ್ಪಲು, ಬಾಳೆಲೆ, ಶ್ರೀಮಂಗಲ ಶಾಖೆಗಳ ಗ್ರಾಹಕರಿಗೆ, ಸಾರ್ವಜನಿಕರಿಗೆ ಮತ್ತು ಸಿಬ್ಬಂದಿಗಳಿಗೆ ವಿದ್ಯುತ್ ಸೇವೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಅರಿವು ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾ. ೧೦ ರಂದು (ಇಂದು) ಬಾಳೆಲೆ ಶಾಖೆಯಲ್ಲಿ ಹಾಗೂ ತಾ. ೧೧ ರಂದು ಶ್ರೀಮಂಗಲ ಶಾಖೆಯಲ್ಲಿ ಅರಿವು ಕಾರ್ಯಕ್ರಮ ಜರುಗಲಿದೆ ಎಂದು ಗೋಣಿಕೊಪ್ಪಲು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀಲಶೆಟ್ಟಿ ತಿಳಿಸಿದ್ದಾರೆ.