ಸೋಮವಾರಪೇಟೆ, ಫೆ. ೯: ಆಸ್ತಿ ವಿಚಾರಕ್ಕೆ ಸಂಬAಧಿಸಿದAತೆ ಕಳೆದ ೨೦೧೯ರಲ್ಲಿ ಜೋಡಿ ಕೊಲೆ ಮಾಡಿದ್ದ ಆರೋಪದ ಮೇರೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯ ಜಾಮೀನನ್ನು ಇದೀಗ ಹೈಕೋರ್ಟ್ ರದ್ದು ಮಾಡಿ ಮಹತ್ವದ ಆದೇಶ ಹೊರಡಿಸಿದೆ.

ಈ ಆದೇಶ ಹೊರಬಿದ್ದ ಬೆನ್ನಲ್ಲೇ ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆಯ ಹಿನ್ನೆಲೆ: ಕಳೆದ ತಾ. ೩೦.೪.೨೦೧೯ರಂದು ಸಮೀಪದ ದೊಡ್ಡಮಳ್ತೆ ಗ್ರಾಮದ ನಿವಾಸಿ ದಿ. ವೀರರಾಜು ಅವರ ಪತ್ನಿ ಕವಿತ (೪೫) ಮತ್ತು ಅವರ ಪುತ್ರಿ ಜಗಶ್ರೀ (೧೭) ಅವರುಗಳನ್ನು ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ಅದೇ ಗ್ರಾಮದ ಪೊನ್ನಪ್ಪ ಅವರ ಪುತ್ರ ದಿಲೀಪ್‌ಕುಮಾರ್ ಎಂಬಾತ ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆಗೈದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾ. ೩೦.೪.೨೦೧೯ರ ಬೆಳಗ್ಗಿನ ಜಾವ ೧೦.೩೦ರ ಸಮಯದಲ್ಲಿ ತಮಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕತ್ತಿಯೊಂದಿಗೆ ಆಗಮಿಸಿದ ದಿಲೀಪ್‌ಕುಮಾರ್, ಆಸ್ತಿ ವಿಚಾರಕ್ಕೆ ಸಂಬAಧಿಸಿದAತೆ ಕಲಹ ಏರ್ಪಟ್ಟ ಸಂದರ್ಭ ತಾಯಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಘಟನೆಯಿಂದ ತಾಯಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ದಿಗ್ಭçಮೆ ಉಂಟು ಮಾಡಿತ್ತು.

ಘಟನೆಯ ನಂತರ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್, ಡಿವೈಎಸ್‌ಪಿ ದಿನಕರಶೆಟ್ಟಿ, ಸೋಮವಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ನಂಜುAಡೇಗೌಡ, ಠಾಣಾಧಿಕಾರಿ ಶಿವಶಂಕರ್ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ತಾ. ೦೨.೫.೨೦೧೯ ರಂದು ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿ ದಿಲೀಪ್‌ಕುಮಾರ್‌ಗೆ ಜಿಲ್ಲಾ ಸತ್ರ ನ್ಯಾಯಾಲಯ ೨೪.೦೬.೨೦೧೯ರಂದು ಜಾಮೀನು ಮಂಜೂರು ಮಾಡಿತ್ತು. ನಂತರ ಗ್ರಾಮಕ್ಕೆ ಆಗಮಿಸಿದ ದಿಲೀಪ್, ಕೋಳಿ ಮಾಂಸದ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ. ಜೋಡಿ ಕೊಲೆ ಆರೋಪಿಗೆ ಇಷ್ಟು ಬೇಗ ಜಾಮೀನು ಮಂಜೂರು ಮಾಡಿದ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶದ ವಿರುದ್ಧ, ಮೃತೆ ಕವಿತ ಅವರ ಸಹೋದರಿ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ಕಳೆದ ತಾ. ೨೭.೧.೨೦೨೨ರಂದು ತೀರ್ಪು ನೀಡಿದ್ದು, ಆರೋಪಿಗೆ ಜಿಲ್ಲಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ಪರಿಣಾಮ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.