ಮಡಿಕೇರಿ, ಫೆ. ೯: ಭಾಗಮಂಡಲ ಬಳಿಯ ನಿಶಾನೆ ಮೊಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮ, ಕಾನೂನು ಬಾಹಿರ ಹರಳು ಕಲ್ಲು ಗಣಿಗಾರಿಕೆಯಿಂದಾಗಿ ದೇವಾಲಯಕ್ಕೆ ಭೂ ಕುಸಿತದ ಆತಂಕವಿದ್ದು, ಕೂಡಲೇ ಅಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ದಂಧೆಯಲ್ಲಿ ಶಾಮೀಲಾದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ದ. ಕನ್ನಡ ಉಸ್ತುವಾರಿ ಸಚಿವರಾದ ಎಸ್. ಅಂಗಾರ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಪಷ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಶಾಸಕ ಕೆ.ಜಿ. ಬೋಪಯ್ಯ, ಅರಣ್ಯ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಗರ್ಗ್, ಕೊಡಗು ಜಿಲ್ಲಾಧಿಕಾರಿಗಳು, ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪೊಲೀಸ್ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ನಿಶಾನೆ ಮೊಟ್ಟೆಯಲ್ಲಿ ಅಕ್ರಮ ಹರಳು ಕಲ್ಲು ಗಣಿಗಾರಿಕೆ ನಡೆಯುತ್ತಿ ರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಭೆ ನಡೆಸಿದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಸಮಿತಿಯವರು ಹಾಗೂ ಗ್ರಾಮಸ್ಥರು; ಗಣಿಗಾರಿಕೆಯಿಂದಾಗಿ ದೇವಾಲಯಕ್ಕೆ ಅಪಾಯ ಸಂಭವಿಸುವದನ್ನು ಮನಗಂಡು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬAಧಿಸಿದವರಿಗೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಂಡು ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಏನಿದೆ..?
ದ. ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯ ಪ್ರವರ್ಗ ಎ ಗೆ ಸೇರಿದ ಅಧಿಸೂಚಿತ ಸಂಸ್ಥೆಯಾಗಿ ರುತ್ತದೆ. ದೇವಸ್ಥಾನವು ಬೆಟ್ಟ ಶ್ರೇಣಿ ಗಳಿಂದ ಆವೃತ್ತವಾಗಿದ್ದು, ದೇವಾಲ ಯದ ಪೂರ್ವ ಭಾಗದ ಬೆಟ್ಟವು ಕೊಡಗು ಜಿಲ್ಲೆಯ ಅರಣ್ಯ ವೃತ್ತದ ಮಡಿಕೇರಿ ಉಪ ವಿಭಾಗದ ಭಾಗಮಂಡಲ ವಲಯದ ತೊಡಿಕಾನ ಉಪ ವಲಯದ ಸ.ನಂ.೧/೧ಎ ಪಟ್ಟಿಘಾಟ್ ಮೀಸಲು ಅರಣ್ಯದ ಅರ್ಧ ಕಿ.ಮೀ.ವ್ಯಾಪ್ತಿಯಲ್ಲಿರುತ್ತದೆ. ಅಲ್ಲದೆ, ಎರಡು ಜಿಲ್ಲೆಗಳ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುತ್ತದೆ. ಕಳೆದ ೧೫-೨೦ ವರ್ಷಗಳಿಂದ ದೇವಾಲಯದ ಒಂದು ಕಿ.ಮೀ. ದೂರದ ಮೀಸಲು ಅರಣ್ಯ ಬೆಟ್ಟದಲ್ಲಿ ಅಕ್ರಮವಾಗಿ ಹರಳು ಕಲ್ಲು ನಿಕ್ಷೇಪವನ್ನು ಪತ್ತೆ ಮಾಡಿ ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳು ಹಾಗೂ ಸ್ಥಳೀಯ ಕೆಲವು ಗ್ರಾಮಸ್ಥರು ಪ್ರಭಾವಿ ದಂಧೆಕೋರರೊAದಿಗೆ ಶಾಮೀಲಾಗಿ ಅರಣ್ಯದೊಳಗೆ ಅಕ್ರಮ ಹರಳು ಕಲ್ಲು ಗಣಿಗಾರಿಕೆ ನಡೆಸಿ ಬೃಹತ್ ಗಾತ್ರದ ಗುಂಡಿಗಳನ್ನು ತೋಡಿ ಸುರಂಗ ಕೊರೆದು ಹರಳು ಕಲ್ಲು ಲೂಟಿ ಮಾಡುತ್ತಿದ್ದಾರೆ.
ಕಳೆದ ಬಾರಿ ಈ ಬೆಟ್ಟದ ಇನ್ನೊಂದು ಫಾರ್ಶ್ವದ ತಲಕಾವೇರಿಯ ಬ್ರಹ್ಮಗಿರಿ ತಪ್ಪಲಿನ ಗಜಗಿರಿ ಬೆಟ್ಟ ಕುಸಿದು ಐವರು ಅರ್ಚಕರು ಸೇರಿದಂತೆ ನೂರಾರು ಎಕರೆ ಆಸ್ತಿ ಪಾಸ್ತಿಗೆ ಹಾನಿಯಾಗಿತ್ತು. ಘಟನೆಯನ್ನು ತಜ್ಞರಿಂದ ಪರಾಮರ್ಶಿಸಲಾಗಿ ಬೆಟ್ಟದ ಮೇಲೆ ಅರಣ್ಯ ಇಲಾಖೆ ತೋಡಿದ ಇಂಗು ಗುಂಡಿಗಳೇ ಕಾರಣ ಎಂದು ವರದಿ ನೀಡಿರುತ್ತಾರೆ. ಈ ಬೆಟ್ಟದಲ್ಲೂ ಕೂಡ ತೊಡಿಕಾನ ದೇವಾಲಯದ ಕಣ್ಣಳತೆ ದೂರದಲ್ಲಿರುವ ಸ್ಥಳದಲ್ಲಿ ನಡೆಯು ತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಯದಿದ್ದಲ್ಲಿ ಮುಂದಿನ ಮಳೆಗಾಲ ದಲ್ಲಿ ಬೆಟ್ಟ ಕುಸಿದು ದೇವಾಲಯ ಹಾಗೂ ಗ್ರಾಮಕ್ಕೆ ಹಾನಿ ಸಂಭವಿಸುವ ಬಗ್ಗೆ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಕೂಡಲೇ ಈ ಅಕ್ರಮ ಗಣಿಗಾರಿಕೆ ಯನ್ನು ನಿಲ್ಲಿಸಿ, ಶಾಮೀಲಾದವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಂಡು ಕಾನೂನು ಬಾಹಿರ ಚಟುವಟಿಕೆಯನ್ನು ಸಂಪೂರ್ಣ ವಾಗಿ ಸ್ಥಗಿತಗೊಳಿಸುವಂತೆ ಕೋರ ಲಾಗಿದೆ. ?ಸಂತೋಷ್, ಸುನಿಲ್