ಕೂಡಿಗೆ, ಫೆ. ೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗಡ್ಡಹಳ್ಳಿ ಮತ್ತು ಕೂಡಿಗೆ-ಕೊಪ್ಪಲು-ಕೋಟೆ ಹಳೆ ಕೂಡಿಗೆ ಗ್ರಾಮದಲ್ಲಿರುವ ಪೈಸಾರಿ ಜಾಗದ ರಸ್ತೆಗಳು ಮತ್ತು ದಂಡಿನಮ್ಮ ದೇವಾಲಯಕ್ಕೆ ಸೇರಿದ ಕೆರೆಯನ್ನು ದುರಸ್ತಿಪಡಿಸಿ, ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಬೇಕೆಂದು ಈ ವ್ಯಾಪ್ತಿಯ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ದಂಡಿನಮ್ಮ ಕೆರೆಯು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿಕೊಂಡಿದೆ. ಹಾರಂಗಿ ಮುಖ್ಯನಾಲೆಯ ನೀರು ಸಂಗ್ರಹವಾಗಿ ತಗ್ಗುಪ್ರದೇಶದ ನೂರಾರು ಎಕರೆಗಳಷ್ಟು ಪ್ರದೇಶಗಳಿಗೆ ನೀರಿನ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ಕೆಲವ್ಯಕ್ತಿಗಳು ದಂಡಿನಮ್ಮ ಕೆರೆಯ ಕೆಲ ಭಾಗವನ್ನು ಮತ್ತು ಪೈಸಾರಿ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬAಧಿಸಿದAತೆ ಅನೇಕ ಬಾರಿ ಕಂದಾಯ ಇಲಾಖೆಗೆ ದೇವಾಲಯ ಸಮಿತಿಯ ವತಿಯಿಂದ ಅರ್ಜಿಯನ್ನು ಸಲ್ಲಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇಲಾಖೆ ವತಿಯಿಂದ ಈ ಬಗ್ಗೆ ಕ್ರಮವಹಿಸುವಂತೆ ಶ್ರೀ ಬಸವೇಶ್ವರ ದಂಡಿನಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರ್ ಸೇರಿದಂತೆ ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ.

ದೇವಾಲಯ ಸಮಿತಿ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಕೆರೆಯ ಸರ್ವೆ ಕಾರ್ಯಕ್ಕೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿರಿಗೆ ಅನುಕೂಲವಾಗುವಂತಹ ಪೈಸಾರಿ ಜಾಗದ ರಸ್ತೆಗಳ ಒತ್ತುವರಿ ತೆರವುಗೊಳಿಸಿಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ. ಸಂಬAಧಿಸಿದ ಕಂದಾಯ ಇಲಾಖೆ ಮತ್ತು ನೀರಾವರಿ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿಯಾಗಿರುವ ಜಾಗವನ್ನು ಮತ್ತು ದೇವಾಲಯಕ್ಕೆ ಹೊಂದಿಕೊAಡಿರುವ ದಂಡಿನಮ್ಮ ಕೆರೆ ಜಾಗವನ್ನು ರಸ್ತೆಯ ಜಾಗವನ್ನು ಗುರುತಿಸಿ ತೆರವುಗೊಳಿಸಿಕೊಡಬೇಕೆಂದು ಗ್ರಾಮಸ್ಥರ ಮನವಿ ಮಾಡಿದ್ದಾರೆ.