ಪೊನ್ನಂಪೇಟೆ, ಫೆ.೭: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮ ಪಂಚಾಯಿತಿಯ ೨೦೨೧-೨೨ ನೇ ಸಾಲಿನ ಗ್ರಾಮ ಸಭೆ ತಾ.೧೦ ರಂದು ಪೂರ್ವಾಹ್ನ ೧೧ ಗಂಟೆಗೆ ತೂಚಮಕೇರಿ ಗ್ರಾಮದ ಸಮುದಾಯ ಭವನದಲ್ಲಿ ನಡೆಯಲಿದೆ. ಗ್ರಾ.ಪಂ.ಅಧ್ಯಕ್ಷೆ ಹೆಚ್.ಎಲ್.ಶೈಲಜ ಅವರ ಅಧÀ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಪೊನ್ನಂಪೇಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಎಂ.ಕೆ.ದೀನಾ ನೋಡಲ್ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ ಎಂದು ಬಲ್ಯಮಂಡೂರು ಗ್ರಾ.ಪಂ. ಪ್ರಕಟಣೆ ತಿಳಿಸಿದೆ.