ಮಡಿಕೇರಿ, ಫೆ. ೮; ಚೆಟ್ಟಳ್ಳಿ ಗ್ರಾಮ ಪಂಚಾಯ್ತಿ ಗ್ರಾಮ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರುಗಳು ಮೈಕ್ ಕಿತ್ತಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರಿಂದ ಸಮಗ್ರ ತನಿಖೆಯಾಗಲಿ ಎಂದು ಚೆಟ್ಟಳ್ಳಿ ಬಿಜೆಪಿ ಆಗ್ರಹಿಸಿದೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸೋಮವಾರಪೇಟೆ ಮಂಡಲ ಕಾರ್ಯದರ್ಶಿ ಮೇರಿ ಅಂಬುದಾಸ್ ಅವರು; ಗ್ರಾಮ ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಮತ್ತೋರ್ವ ಸದಸ್ಯೆ ಸುನಿತಾ ಮಂಜುನಾಥ್ ಅವರಿಂದ ಮೈಕ್ ಕಿತ್ತುಕೊಂಡಿಲ್ಲ; ಈ ವಿಚಾರಕ್ಕೆ ಸಂಬAಧಿಸಿದAತೆ ಕಾಂಗ್ರೆಸ್ಸಿಗರು ಅಪ ಪ್ರಚಾರ ಮಾಡುತ್ತಿದ್ದು, ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ತೇಜೋವಧೆ ಮಾಡಲಾಗುತ್ತಿದೆ. ಇದನ್ನು ಖಂಡಿಸುವದಾಗಿ ಹೇಳಿದರು.

ಬೀದಿ ದೀಪ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ಗ್ರಾ.ಪಂ. ಮಾಜಿ ಸದಸ್ಯ ರವಿ ಎಂಬವರು ಆರೋಪಿಸಿದಾಗ ಸುನಿತಾ ಮಂಜುನಾಥ್ ಉತ್ತರ ನೀಡಲು ಮುಂದಾಗಿದ್ದಾರೆ. ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗೆ ಉತ್ತರಿಸುವ ಹಕ್ಕಿದೆ. ಆದರೆ ಎಲ್ಲದಕ್ಕೂ ಸುನಿತಾ ಅವರೇ ಉತ್ತರಿಸುತ್ತಿದ್ದರಿಂದ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಕುಳಿತಲ್ಲಿಂದ ಹಿಂದೆ ತಿರುಗಿ ಬಿಜೆಪಿ ಹಾಗೂ ಮಣಿ ಉತ್ತಪ್ಪ ಅವರ ವಿರುದ್ಧ ಧಿಕ್ಕಾರ ಕೂಗಿದಾಗ ಗೊಂದಲ ಏರ್ಪಟ್ಟಿದೆ. ಎರಡು ವರ್ಷಗಳಿಂದ ಗ್ರಾಮ ಸಭೆ ನಡೆಯದೇ ಇದ್ದುದರಿಂದ ಅವ್ಯವಹಾರಗಳನ್ನು ಮುಚ್ಚಿ ಹಾಕುವ ಸಲುವಾಗಿ ಗೊಂದಲ ಉಂಟುಮಾಡಲಾಗಿದೆ.

ಗ್ರಾಮ ಸಭೆಯ ಪ್ರತಿ ವಿಚಾರ ಗಳನ್ನು ಪೊಲೀಸರು ಚಿತ್ರೀಕರಣ ಮಾಡಿದ್ದಾರೆ. ಎಲ್ಲಿಯೂ ಮಣಿ ಉತ್ತಪ್ಪ ಮೈಕ್ ಕಿತ್ತುಕೊಂಡಿರುವದಿಲ್ಲ, ವೀಡಿಯೋ ಪರಿಶೀಲಿಸಿ ಪೊಲೀಸರು ತನಿಖೆ ಮಾಡಲಿ, ಈ ವಿಚಾರಕ್ಕೆ ಸಂಬAಧಿಸಿದAತೆ ಕಾನೂನು ರೀತ್ಯಾ ಹೋರಾಟ ಮಾಡುತ್ತೇವೆ. ತಪ್ಪು ಮಾಡಿಲ್ಲವೆಂದು ಸಾಬೀತು ಪಡಿಸುತ್ತೇವೆ. ಸುನಿತಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವದಾಗಿ ಎಚ್ಚರಿಸಿದರು.

ಚೆಟ್ಟಳ್ಳಿ ಶಕ್ತಿ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷೆ ಮಾಲಾಶ್ರಿ ಮಾತನಾಡಿ; ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡರೂ ಯಾರೂ ಮಾತನಾಡುವದಿಲ್ಲ; ಇದೀಗ ಗ್ರಾಮ ಸಭೆಯಲ್ಲಾದ ವಿಚಾರಕ್ಕೆ ಮೂಗು ತೂರಿಸಿ ಆರೋಪ ಮಾಡುತ್ತಿರುವದು ಸರಿಯಲ್ಲ. ಘಟನೆ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು. ಶಕ್ತಿ ಕೇಂದ್ರದ ಸಹ ಪ್ರಮುಖ್ ಎಂ.ಸಿ. ರವಿ ಮಾತನಾಡಿ; ಮಣಿ ಉತ್ತಪ್ಪ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸದಸ್ಯ ಎಂ.ಜಿ. ಚೇತನ್, ಕಂಡಕರೆ ಬೂತ್ ಅಧ್ಯಕ್ಷ ಜಗತ್ ನೂಜಿಬೈಲು, ಕಾಫಿ ಬೋರ್ಡ್ ಬೂತ್ ಅಧ್ಯಕ್ಷ ಉದಯಕುಮಾರ್ ಇದ್ದರು.