ಮಡಿಕೇರಿ, ಫೆ. ೮: ಇಷ್ಟ ಬಂದAತೆ ವಸ್ತç ಧರಿಸಿ ಹೋಗಬೇಕೆಂದರೆ ಮದ್ರಸಾಗಳಿಗೆ ಹೋಗಿ ಎಂದು ಹೆಣ್ಣು ಮಕ್ಕಳ ಹಿಜಾಬಿನ ಕುರಿತಾಗಿ ಸಂಸದರು ತುಚ್ಛವಾದ ಮಾತನಾಡಿದ್ದಾರೆ. ಹಿಂಜಾಬ್ ಇಸ್ಲಾಂ ಮಹಿಳೆಯರಿಗೆ ನೀಡುವ ಒಂದು ರಕ್ಷಣಾ ಕವಚ, ಅದು ಇಸ್ಲಾಮಿನ ಸಂಸ್ಕೃತಿ, ಸಣ್ಣ ಪ್ರಾಯದಿಂದಲೇ ಹೆಣ್ಣು ಮಕ್ಕಳು ಅದನ್ನು ಧರಿಸುತ್ತಾ ಬರುತ್ತಾರೆ. ಇತ್ತೀಚಿನ ದಿನಗಳ ವರೆಗೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರಿಂದ ಯಾವುದೇ ತೊಂದರೆಗಳು ಯಾರಿಂದಲೂ ಕಂಡುಬರಲಿಲ್ಲ. ಆದರೆ ಈಗ ಸಂಘಪರಿವಾರ ಸಂಘಟನೆಗಳ ಷಡ್ಯಂತ್ರಗಳಿAದಾಗಿ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿವಾದ ತಲೆ ಎತ್ತುತ್ತಿದೆ.

ಮದ್ರಸಾಗಳ ವಿರುದ್ಧ ತುಚ್ಛವಾಗಿ ಮಾತನಾಡುವ ಪ್ರತಾಪ್ ಸಿಂಹ ಈ ಮದ್ರಸಾಗಳು ದೇಶಕ್ಕೆ ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳಬೇಕಾಗಿದೆ. ಈ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಟದ ಕಿಡಿ ಆರಂಭಿಸಿದ್ದು, ಅಚಂಚಲ ಹೋರಾಟಕ್ಕಿರುವ ಮನೋಸ್ಥೆöÊರ್ಯ ನೀಡಿದ್ದು ಇದೇ ಮದ್ರಸಾಗಳು ಎಂಬುದು ಪ್ರತಾಪ ಸಿಂಹ ತಿಳಿದುಕೊಳ್ಳಬೇಕಾಗಿದೆ ಎಂದು ಕೊಡಗು ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ತಮ್ಲೀಖ್ ದಾರಿಮಿ ಪತ್ರಿಕಾ ಹೇಳಿಕೆಯ ಮೂಲಕ ಸಂಸದರ ಮಾತುಗಳನ್ನು ಖಂಡಿಸಿದ್ದಾರೆ.