ಶನಿವಾರಸಂತೆ, ಫೆ. ೭: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಹಾಗೂ ವಸತಿ ಯೋಜನೆಯ ವಿಶೇಷ ಗ್ರಾಮಸಭೆ ನೋಡಲ್ ಅಧಿಕಾರಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವಿ ಅಧ್ಯಕ್ಷತೆಯಲ್ಲಿ ನಡೆಯಿತು.
೨೦೨೧-೨೨ನೇ ಸಾಲಿನ ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ೧೪, ೧೫ನೇ ಹಣಕಾಸು ಯೋಜನೆಯ ಕಾಮಗಾರಿಗಳ ಲೆಕ್ಕ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ತಾಲೂಕು ಸಂಯೋಜಕ ದಿನೇಶ್ ಸಾರ್ವಜನಿಕ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನ ಮಾಡುವ ಮತ್ತು ಲೆಕ್ಕ ಪರಿಶೋಧನೆ ಬಗ್ಗೆ ಮಾಹಿತಿ ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿ ಸಲೀಂ ಕಾಮಗಾರಿಗಳ ವರದಿಯನ್ನು ನೀಡಿದರು. ಸಂಬAಧಪಟ್ಟ ಇಲಾಖಾ ಇಂಜಿನಿಯರ್ಗಳು ಸಭೆಗೆ ಗೈರು ಹಾಜರಾದ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಪಂಚಾಯಿತಿ ಅಧ್ಯಕ್ಷೆ ವಿನೋದಾ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಪಿ.ಡಿ.ಓ. ಗಿರೀಶ್ ಮಾತನಾಡಿ, ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಮಾಡುವಾಗ ವಸತಿ ರಹಿತರ ಪಟ್ಟಿಯಲ್ಲಿ ಫಲಾನುಭವಿಗಳ ಹೆಸರಿದ್ದು, ಬಿ.ಪಿ.ಎಲ್. ಪಡಿತರ ಚೀಟಿ ಮತ್ತು ಮನೆ ನಿರ್ಮಿಸುವ ಜಾಗಕ್ಕೆ ದಾಖಲಾತಿ ಹೊಂದಿರುವವರನ್ನು ಮಾತ್ರ ಪರಿಗಣಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸಿಬ್ಬಂದಿ ರಾಜೇಶ್, ವಸತಿ ರಹಿತರ ಪಟ್ಟಿ ವಾಚಿಸುತ್ತಿದ್ದಂತೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ೨೦೧೭-೧೮ ರಲ್ಲಿ ರಚಿಸಿದ ಪಟ್ಟಿ ಅವೈಜ್ಞಾನಿಕ ಹಾಗೂ ಅಪೂರ್ಣವಾಗಿದ್ದು, ಮನೆ ಉಳ್ಳವರ ಹೆಸರೂ ಪಟ್ಟಿಯಲ್ಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಇದ್ದು ಅವರ ಹೆಸರುಗಳನ್ನು ಸೇರಿಸಿ ಪರಿಷ್ಕೃತ ಪಟ್ಟಿ ಸಿದ್ಧಪಡಿಸುವಂತೆ ಆಗ್ರಹಿಸಿದರು. ಉಪಾಧ್ಯಕ್ಷೆ ಪಾವನಾ, ಸದಸ್ಯರಾದ ಹನೀಫ್, ದಿನೇಶ್ಕುಮಾರ್, ಮೋಕ್ಷಿತ್ ರಾಜ್, ದೊಡ್ಡಯ್ಯ, ಲೀನಾ, ರೇಣುಕಾ, ಕಾರ್ಯದರ್ಶಿ ದೇವರಾಜ್, ಗ್ರಾಮದ ಪ್ರಮುಖರಾದ ಅಶೋಕ್, ಸುಲೈಮಾನ್, ಗಣೇಶ್, ಸುಬ್ರಮಣ್ಯ, ರೂಪೇಶ್, ನಿಸಾರ್ ಉಪಸ್ಥಿತರಿದ್ದರು.