ಮಡಿಕೇರಿ, ಫೆ. ೮: ಕೊಡಗು ಜಿಲ್ಲೆಯ ಜಿಲ್ಲಾಮಟ್ಟದ ತ್ರೆöÊಮಾಸಿಕ ಪರಿಶೀಲನಾ ಸಮಿತಿ (ಕೆಡಿಪಿ) ಐವರನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದೆ. ಪರಿಶಿಷ್ಟ ವಿಭಾಗದಿಂದ ಭಾಗಮಂಡಲ ತಣ್ಣಿಮಾನಿಯ ಮಿಟ್ಟು ರಂಜಿತ್, ಹಿಂದುಳಿದ ವರ್ಗದಿಂದ ನೆಲ್ಲಿಹುದಿಕೇರಿಯ ವಿ.ಕೆ. ಲೋಕೇಶ್, ಮಹಿಳಾ ವರ್ಗದಿಂದ ಕಿರುಗೂರು - ನಲ್ಲೂರಿನ ಕವಿತಾ ಬೋಜಪ್ಪ, ಸಾಮಾನ್ಯ ವರ್ಗದಿಂದ ನಾಪೋಕ್ಲುವಿನ ಅಂಬಿ ಕಾರ್ಯಪ್ಪ, ಅಲ್ಪಸಂಖ್ಯಾತ ವಿಭಾಗದಿಂದ ಪೊನ್ನಂಪೇಟೆಯ ಕೆ.ಎಂ. ಇಬ್ರಾಹಿಂ ಅವರುಗಳಿಗೆ ನಾಮನಿರ್ದೇಶನ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಮಾಲತಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.