ಚೆಟ್ಟಳ್ಳಿ, ಫೆ. ೮: ಕೊಡಗಿನ ಮೂಲ ಜನಾಂಗವಾದ ಕುಡಿಯ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ, ನೃತ್ಯ ಪರಂಪರೆ ಕಕ್ಕಬೆಯ ಯವಕಪಾಡಿಯ ಕುಡಿಯಡ ಮಂದ್ನಲ್ಲಿ ಮೇಳೈಸಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನಾಲ್ನಾಡ್ ಕುಡಿಯಡ ಮಂದ್ ನಮ್ಮೆ ಸಮಿತಿಯ ಸಹಯೋಗದಲ್ಲಿ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಕುಡಿಯಡ ಮಂದ್ ನಮ್ಮೆ-೨೦೨೨ ನಡೆಯಿತು. ಹಿರಿಯ ಜನಪದ ಕಲಾವಿದ ಪಡಿಯ ಮಲೆ ಗಣೇಶ್ ಬಿದ್ದಪ್ಪ ದುಡಿಕೊಟ್ಟುವ ಮೂಲಕ ಮಂದ್ ತೆರೆದು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜನಾಂಗದ ಆಚಾರ-ವಿಚಾರ, ಪದ್ಧತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕೆAದರು. ನಾಪೋಕ್ಲುವಿನ ಹಿರಿಯ ಜಾನಪದÀ ಕಲಾವಿದ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ, ಕೊಡವ ಜನಾಂಗದ ಅಚಾರ-ವಿಚಾರ ಸಾಹಿತ್ಯ ಬೆಳವಣಿಗೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ಉತ್ತಮ ಸೇವೆ ಹಾಗೂ ಸಹಕಾರದ ಬಗ್ಗೆ ವಿವರಿಸಿದರು. ಹಬ್ಬ ಹರಿದಿನಗಳಲ್ಲಿ ಆಚರಣೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಯಪಡಿಸು ವಂತಾಗಬೇಕೆAದರು.
ತಮಿಳುನಾಡಿನ ಪರಿಶಿಷ್ಟ ಜಾತಿ ಹಾಗೂ ಪಂಗಡ ಆಯೋಗದ ಸದಸ್ಯೆ ಲೀಲಾವತಿ ಧನರಾಜ್ ಮಾತನಾಡಿ, ಕೊಡಗಿನಲ್ಲಿ ಹುಟ್ಟಿ ತಮಿಳುನಾಡಿ ನಲ್ಲಿದ್ದರೂ ಕೊಡಗಿನÀ ಸಂಸ್ಕೃತಿ, ಆಚಾರ-ವಿಚಾರವನ್ನು ಅಲ್ಲಿನ ಜನರಿಗೆ ತಿಳಿಸುತ್ತಿದ್ದೇನೆಂದರು. ನಿವೃತ್ತ ಯೋಧ ಕುಯಿನಾಲಮಲೆ ಬೋಪಯ್ಯ ಮಾತನಾಡಿದರು.
ವೇದಿಕೆಯಲ್ಲಿ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪತ್, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಭರತ್ ಚಂದ್ರದೇವಯ್ಯ ಇದ್ದರು.
ಅತಿಥಿಗಳಿಂದ ಅಕಾಡೆಮಿಯ ತ್ರೆöÊಮಾಸಿಕ ಸಂಚಿಕೆ ಪೊಂಗುರಿ ಪುಸ್ತಕ ಬಿಡುಗಡೆಗೊಳಿಸಿದರು. ಕೋಪಟ್ಟಿಮಲೆ ರೋಹಿಣಿ ಸುನಿಲ್ರವರು ಕುಡಿಯಡ ದೇವನೆಲೆಯ ಬಗ್ಗೆ ವಿಚಾರ ಮಂಡನೆ ಮಾಡಿದರು. ಹಿರಿಯ ಕಲಾವಿದ ಕೋಲಿಂದಮಲೆ ಎ. ಬೋಪಯ್ಯ, ಚೀಯಕಪೂವಂಡ ದೇವಯ್ಯ, ಕರಾಟೆ ಪಟು ಕು. ಕೆ.ಪಿ. ಚಂಗಪ್ಪ ಚೇತನ್ ಅವರನ್ನು ಸನ್ಮಾನಿಸಿ ಗೌರವಿಸಲಾ ಯಿತು. ಕಾರ್ಯಕ್ರಮದ ಸಂಚಾಲಕ ರಾಗಿ ಕುಡಿಯರ ಮುತ್ತಪ್ಪ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದ ಅಂಗವಾಗಿ ಕೋಲಾಟ್, ಬೊಳಕಾಟ್ ಉರ್ಟಿಕೊಟ್ಟ್ ಆಟ್ ಪ್ರದರ್ಶನ ಹಾಗೂ ಹಾಡುಗಾರಿಕೆ ನಡೆದವು.
-ಪುತ್ತರಿರ ಕರುಣ್ಕಾಳಯ್ಯ