ಬೆಂಗಳೂರು, ಫೆ. ೮: ೨೦೨೧-೨೨ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ. ಏಪ್ರಿಲ್ ೧೬ ರಿಂದ ಮೇ ೬ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

೧೬.೪.೨೦೨೨ ಗಣಿತಶಾಸ್ತç, ಶಿಕ್ಷಣ ಶಾಸ್ತç, ಮೂಲ ಗಣಿತ, ಏ. ೧೮ ರಂದು ರಾಜ್ಯಶಾಸ್ತç, ಸಂಖ್ಯಾಶಾಸ್ತç, ಏ. ೧೯ ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್, ಏ. ೨೦ ಇತಿಹಾಸ, ಭೌತಶಾಸ್ತç ಏ. ೨೧ ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್, ಏ. ೨೨ ತರ್ಕ ಶಾಸ್ತç, ವ್ಯವಹಾರ ಅಧ್ಯಯನ ಏ. ೨೩ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಮನಃಶಾಸ್ತç, ರಸಾಯನಶಾಸ್ತç, ಏ. ೨೫ ಅರ್ಥ ಶಾಸ್ತç, ಏ. ೨೬ ಹಿಂದಿ, ಏ. ೨೮ ಕನ್ನಡ ಏ. ೩೦ ಸಮಾಜ, ವಿದ್ಯುನ್ಮಾನ ಶಾಸ್ತç, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.

ಮೇ. ೨ ರಂದು ಭೂಗೋಳ ಶಾಸ್ತç, ಜೀವಶಾಸ್ತç, ಮೇ. ೪ ರಂದು ಇಂಗ್ಲೀಷ್, ಮೇ ೬ ರಂದು ಲೆಕ್ಕ ಶಾಸ್ತç, ಭೂಗರ್ಭ ಶಾಸ್ತç, ಗೃಹ ವಿಜ್ಞಾನ, ಐಚ್ಛಿಕ ಕನ್ನಡ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.