ಕೂಡಿಗೆ, ಫೆ. ೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕೂಡಿಗೆ ಕೃಷಿ ಕ್ಷೇತ್ರದ ಆವರಣದ ರಸ್ತೆ ಕಾಮಗಾರಿ ಆರಂಭಗೊAಡಿದೆ. ಶಾಸಕರ ಸೂಚನೆಯಂತೆ ಮಳೆ ಹಾನಿ ಅನುದಾನದಲ್ಲಿ ರೂ. ೩೫ ಲಕ್ಷ ವೆಚ್ಚದ ಕಾಮಗಾರಿಗೆ ಕ್ರಿಯಾ ಯೋಜನೆಯನ್ನು ಜಿಲ್ಲಾ ಇಂಜಿನಿಯರ್ ವಿಭಾಗದಲ್ಲಿ ತಯಾರಿಸಲಾಗಿತ್ತು. ಅದರ ಅನುಗುಣವಾಗಿ ಡಾಂಬರೀಕರಣ ಮೂಲಕ ರಸ್ತೆಯ ಕಾಮಗಾರಿ ನಡೆಯುತ್ತಿದೆ.

ಕೂಡಿಗೆ ಕೃಷಿ ಕ್ಷೇತ್ರದ ಮುಖ್ಯ ರಸ್ತೆಯಿಂದ ಆವರಣದಲ್ಲಿರುವ ಸೈನಿಕ ಶಾಲೆಯ ಮುಂಭಾಗದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳನ್ನು ಕಡಿದು ನಂತರ ರಸ್ತೆಗೆ ಡಾಂಬರೀಕರಣ ಮಾಡುವ ಕೆಲಸ ನಡೆಯುತ್ತಿದೆ.

ತಾಲೂಕು ಪಂಚಾಯತ್ ಇಂಜಿನಿಯರ್ ಕೀರ್ತನ್ ಕುಮಾರ್, ಗುತ್ತಿಗೆದಾರ ವಿಜಯ್ ಕುಮಾರ್ ಸ್ಥಳದಲ್ಲಿದ್ದರು.