ಗೋಣಿಕೊಪ್ಪ ವರದಿ, ಫೆ. ೬: ಬಾಳೆಲೆ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾಗಿ ಎನ್. ಕೆ. ಪ್ರಭು ಅವರು, ನಿವೃತ್ತಿ ಪಡೆದ ಡಾ. ಜೆ. ಸೋಮಣ್ಣ ಅವರಿಂದ ಶುಕ್ರವಾರ ಅಧಿಕಾರ ಪಡೆದುಕೊಂಡರು.
ಈ ಸಂದರ್ಭ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಸಹ ಕಾರ್ಯದರ್ಶಿ ಪೋಡಮಾಡ ಮೋಹನ್, ಖಜಾಂಚಿ ಅಡ್ಡೇಂಗಡ ಬಿ ದೇವಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್ ಉಪಸ್ಥಿತರಿದ್ದರು.