ಮಡಿಕೇರಿ, ಫೆ. ೭; ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯ, ತೊಡಿಕಾನ ಉಪ ವಲಯದ ತಾವೂರು-ತಣ್ಣಿಮಾನಿ ಗ್ರಾಮಕ್ಕೆ ಒಳಪಡುವ ನಿಶಾನೆ ಮೊಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮ ಹರಳು ಕಲ್ಲು ಗಣಿಗಾರಿಕೆಗೆ ಸಂಬAಧಿಸಿದAತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ರಾಜ್ಯದ ಮುಖ್ಯಮಂತ್ರಿಗಳು, ಅರಣ್ಯ ಇಲಾಖಾ ಸಚಿವರು, ಅರಣ್ಯ, ಜೀವಶಾಸ್ತç ಮತ್ತು ಪರಿಸರ ಇಲಾಖೆ ಅಪರ ಪ್ರಧಾನ ಕಾರ್ಯದರ್ಶಿಗಳು, ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಪಡೆಗಳ ಮುಖ್ಯಸ್ಥರುಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಿಶಾನೆಮೊಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮ ಹರಳುಕಲ್ಲು ಗಣಿಗಾರಿಕೆ ಬಗ್ಗೆ ಸರಕಾರದ ಗಮನ ಸೆಳೆದಿರುವ ರವಿಕುಶಾಲಪ್ಪ; ನಿಶಾನೆಮೊಟ್ಟೆಯಲ್ಲಿ ೨೫-೧೧-೨೦೨೧ರಿಂದ ೩೧-೧೨-೨೦೨೧ರವರೆಗೆ ಹರಳು ಕಲ್ಲು ಗಣಿಗಾರಿಕೆ ನಡೆದಿದೆ ಎಂಬ
ಮಾಹಿತಿ
ಅರಣ್ಯ
ಇಲಾಖೆ
ಅಧಿಕಾರಿ
ಗಳಿಂದ ತಿಳಿದು ಬಂದಿದೆ. ಗಣಿಗಾರಿಕೆ ನಡೆದ ಸ್ಥಳದಿಂದ ಹತ್ತು ಮೀ. ದೂರದಲ್ಲಿ ಅರಣ್ಯ ಇಲಾಖೆಯ ಕಾವಲು ಠಾಣೆಯಿದ್ದು, ಈ ಅವಧಿಯಲ್ಲಿ ಸ್ಥಳದಲ್ಲಿ ಸಿಬ್ಬಂದಿ ಹಾಜರಿದ್ದರೂ ಅಕ್ರಮ
(ಮೊದಲ ಪುಟದಿಂದ) ಗಣಿಗಾರಿಕೆ ನಡೆದಿರುವದನ್ನು ಗಮನಿಸಿದರೆ ಈ ದಂಧೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಪಾಲುದಾರಿಕೆ ಇರುವದು ಸ್ಪಷ್ಟವಾಗುತ್ತದೆ. ಪ್ರಕರಣದ ಬಗ್ಗೆ ಮಾಧ್ಯಮದಲ್ಲಿ ವರದಿಯಾದ ಬಳಿಕ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ನಂತರ ಅರಣ್ಯ ಇಲಾಖೆ ೫-೧-೨೦೨೨ರಂದು ಅರಣ್ಯ ಅಪರಾಧ ಮೊಕದ್ದಮೆ ದಾಖಲಿಸಿದೆ ಎಂದು ತಿಳಿಸಿದ್ದಾರೆ.
ಶಿಸ್ತು ಕ್ರಮ ಕೈಗೊಂಡಿಲ್ಲ..!
ಗಣಿಗಾರಿಕೆ ನಡೆದಿರುವ ಬಗ್ಗೆ ಗಮನಕ್ಕೆ ಬಂದ ಬಳಿಕ ತಾ.೫-೧-೨೦೨೨ರಂದು ತಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕೆಲವೊಂದು ಪ್ರಮುಖ ಅಂಶಗಳನ್ನು ಗಮನಿಸಿದ್ದೇನೆ. ಗಣಿಗಾರಿಕೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ೨೦೧೮ರಿಂದ ಕಾವಲು ಠಾಣೆ ನಿರ್ಮಿಸಿ ಸಿಬ್ಬಂದಿಗಳನ್ನು ನೇಮಿಸಿದೆ. ತಾ. ೨೫-೧೨-೨೦೨೧ರಿಂದ ಗಣಿಗಾರಿಕೆ ನಡೆದಾಗ ಉಪ ವಲಯ ಅರಣ್ಯಾಧಿಕಾರಿ ಹೆಚ್.ಮೂರ್ತಿ ಹಾಗೂ ಸಚಿನ್ ಪೊಲಾರ್ ಎಂಬ ಅರಣ್ಯ ರಕ್ಷಕ ಕರ್ತವ್ಯದಲ್ಲಿದ್ದರು. ಕಾವಲು ಠಾಣೆಯಿಂದ ಕೇವಲ ಹತ್ತು ಮೀ. ದೂರದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ನೆರವಿಲ್ಲದೆ ಈ ಮಟ್ಟದ ಗಣಿಗಾರಿಕೆ ನಡೆಯಲು ಸಾಧ್ಯವಿಲ್ಲ. ಈ ಮೊದಲು ಇದೇ ಸ್ಥಳದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳ ಬಗ್ಗೆ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿದೆ. ತಾ.೯-೮-೨೦೧೮ರಲ್ಲಿ ಅರಣ್ಯ ಅಪರಾಧ ಪ್ರಕರಣ ಸಂಖ್ಯೆ ೬/೨೦೧೮-೧೯ ಮತ್ತು ತಾ. ೨-೧೨೦೨೦ರಲ್ಲಿ ಪ್ರಕರಣ ಸಂಖ್ಯೆ ೧೫/೨೦೧೯-೨೦ ಪ್ರಮುಖವಾದುದು. ಆದರೆ ಈವರೆಗೂ ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸುವ ಕೆಲಸ ಆಗಿಲ್ಲ. ಅದೇ ರೀತಿ ಕರ್ತವ್ಯಲೋಪವೆಸಗಿದ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಪತ್ರದಲ್ಲಿ ನಮೂದಿಸಲಾಗಿದೆ.
ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು..!
ಈ ದಂಧೆಯಲ್ಲಿ ಪ್ರಬಲ ಸಂಪರ್ಕಗಳಿರುವ ಸಮಾಜಘಾತುಕ ಶಕ್ತಿಗಳ ಪಾತ್ರವಿದೆ, ಇಲ್ಲಿ ಸಂಗ್ರಹಿಸಲಾದ ಕೆಂಪು ಕಲ್ಲುಗಳನ್ನು ಸೂರತ್ಗೆ ಸಾಗಿಸುವ ವ್ಯವಸ್ಥಿತ ಸಂಪರ್ಕ ಜಾಲವಿದೆ. ಈ ವರೆಗೆ ನಡೆದ ದಂಧೆಯಲ್ಲಿ ಕೋಟ್ಯಂತರ ರೂಪಾಯಿ ಹರಳು ಕಲ್ಲನ್ನು ಸಂಗ್ರಹಿಸಿ ಸಾಗಿಸಲಾಗಿದೆ. ಈ ವ್ಯವಹಾರಗಳೆಲ್ಲವೂ ಹವಾಲ ಮಾರ್ಗದಲ್ಲಿ ನಡೆಯುತ್ತಿರುವದರಿಂದ ಸರಕಾರಕ್ಕೆ ಯಾವದೇ ತೆರಿಗೆ ಲಭಿಸುತ್ತಿಲ್ಲ. ಇಲ್ಲಿ ನಡೆಯುತ್ತಿರುವ ಗಣಿಗಾರಿಕೆÀ ಪರಿಸರ ನಾಶಕ್ಕೆ ನೇರವಾಗಿ ಕಾರಣವಾಗುತ್ತಿರುವ, ಸರಕಾರಕ್ಕೆ ನಷ್ಟ ಮಾಡುತ್ತಿರುವ ಮತ್ತು ಸಮಾಜಘಾತುಕ ಶಕ್ತಿಗಳ ಬಲವರ್ಧನೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆಯ ಕುರಿತು ದಾಖಲಾಗಿರುವ ಎಲ್ಲ ಅಪರಾಧ ಪ್ರಕರಣಗಳಿಗೆ ಸಂಬAಧಿಸಿದAತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸುವಂತೆ ಕೋರಿಕೊಳ್ಳಲಾಗಿದೆ.
ಆಸ್ತಿ ಬಗ್ಗೆ ತನಿಖೆಯಾಗಲಿ..!
ಈ ಪ್ರಕರಣದಲ್ಲಿ ಭಾಗಿಯಾದ, ಕರ್ತವ್ಯ ಲೋಪವೆಸಗಿದ ಅರಣ್ಯ ಇಲಾಖಾ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಬಾಗಮಂಡಲ ಪ್ರಾದೇಶಿಕ ವಲಯದಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳ ಒಟ್ಟು ಘೋಷಿತ ಆದಾಯ ಮತ್ತು ಅವರು ಹೊಂದಿರುವ ಚರ ಮತ್ತು ಸ್ಥಿರ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು. ಯಾರಾದರೂ ಘೋಷಿತ ಆದಾಯಗಳಿಗಿಂತ ಅಧಿಕ ಆದಾಯ ಹೊಂದಿದ್ದಲ್ಲಿ ಅವರ ವಿರುದ್ಧ ‘ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿAಗ್ ಆ್ಯಕ್ಟ್’ನಡಿ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮುಖೇನ ಒತ್ತಾಯಿಸಿದ್ದಾರೆ.
?ಸಂತೋಷ್, ಸುನಿಲ್