ಕೂಡಿಗೆ, ಫೆ. ೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಶ್ರೀ ಗುರು ಶನಿಮಹಾತ್ಮ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ ದೇವಾಲಯದ ಆವರಣದಲ್ಲಿ ಶ್ರೀ ಗುರು ಶನಿಮಹಾತ್ಮ ವಿಗ್ರಹ ಮತ್ತು ನವಗ್ರಹ, ನಾಗಿಣಿ ವಿಗ್ರಹಗಳ ಪ್ರತಿಷ್ಠಾಪನೆಯ ಹಾಗೂ ಕುಂಬಾಭಿಷೇಕ ಮಹೋತ್ಸವ ಕಾರ್ಯಕ್ರಮ ಹಾರಂಗಿಯ ದೇವಾಲಯದ ಆವರಣದಲ್ಲಿ ನಡೆಯಿತು.
ದೇವಾಲಯದ ಆವರಣದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಸಂಬAಧಿಸಿದAತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ರಾಮನಾಥಪುರ ಶೈಷವರ್ಮ, ಕೇಶವ ಪ್ರಸಾದ್, ಗಣೇಶ್ ಶರ್ಮಾ ತಂಡದಿAದ ಪೂಜಾ ಕೈಂಕರ್ಯಗಳೊAದಿಗೆ ಪ್ರತಿಷ್ಠಾಪನೆ ಮತ್ತು ಕುಂಬಾಭಿಷೇಕ ಕಾರ್ಯಕ್ರಮಗಳು ನಡೆದವು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಸ್ಕರ್ ನಾಯಕ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ, ಮಣಿ, ಪಿಡಬ್ಲೂö್ಯಡಿ ಗುತ್ತಿಗೆದಾರ ಪವನ್ ಕುಮಾರ್, ಪ್ರಮುಖರಾದ ಹಾರಂಗಿ ಸುಧೀರ್ ಅಪ್ಪಾಜಿ, ವೇಲು, ಮಣಿ ಅರುಣ್, ಗ್ರಾಮ ಪಂಚಾಯಿತಿ ಸದಸ್ಯ ಮಣಿ ಕುಮಾರ್, ಶಿವಣ್ಣ ಸೇರಿದಂತೆ ದಾನಿಗಳು ಪೋಷಕ ಸಂಘದ ಅಧ್ಯಕ್ಷ ಮಾದೇವ್, ಉಪಾಧ್ಯಕ್ಷ ರಾಜು ಕಾರ್ಯದರ್ಶಿ ಚಂದ್ರು, ಖಜಾಂಚಿ ವೀಣಾ ಮಂಜುನಾಥ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಬಂದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.