
ಮುಂಬೈ, ಫೆ. ೬: ದೇಶದ ಗಾಯನ ಕೋಗಿಲೆ ಎಂದೇ ಗುರುತಿಸಲ್ಪಡುವ ಲತಾ ಮಂಗೇಶ್ಕರ್ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ ಉಸಿರು ನಿಲ್ಲಿಸಿದ್ದಾರೆ. ಸೆಪ್ಟೆಂಬರ್ ೨೮, ೧೯೨೯ ರಂದು ಜನಿಸಿದ ಲತಾ ಅವರು ಸುಮಾರು ೨೨ ಭಾಷೆಗಳಲ್ಲಿ ೩೦ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ೧೯೬೭ರಲ್ಲಿ ಬಿಡುಗಡೆಯಾದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಕನ್ನಡ ಚಲನಚಿತ್ರದಲ್ಲಿನ ‘ಬೆಳ್ಳನೆ ಬೆಳಗಾಯಿತು’ ಮತ್ತು ‘ಎಲ್ಲಾರೆ ಇರತೀರೋ ಎಂದಾರೆ ಬರತೀರೋ’ ಹಾಡುಗಳನ್ನು ಹಾಡಿದ್ದಾರೆ.
ಶಾಸ್ತಿçÃಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಹಾಗೂ ಶ್ರವಂತಿ ಅವರ ಪುತ್ರಿ. ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. ಲತಾ ಅವರ ಮೊದಲ ಹೆಸರು ‘ಹೇಮಾ’ ಎಂದು. ‘ಭಾವ್ ಬಂಧನ್’ ನಾಟಕದಲ್ಲಿ ಮಾಡಿದ ಅಭಿನಯದ ನಂತರ ಅವರ ಹೆಸರು ಲತಾ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಇದರಿಂದ ಲತಾ ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟರು. ಸಣ್ಣ-ಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡರು.
ತಮ್ಮ ತಂದೆಯ ನಿರ್ದೇಶನದ ‘ಸಂಗೀತ್ ಸೌಭದ್ರ್', ನಾಟಕದ ನಾರದನ ಪಾತ್ರಧಾರಿ ಏನೋ ಕಾರಣದಿಂದ ಬರಲಿಲ್ಲ. ಲತಾ, ತಂದೆಯವರನ್ನು ಒಪ್ಪಿಸಿ ತಾವೇ ಅದನ್ನು ಮಾಡಿದರು. ೮ ವರ್ಷದ ಲತಾ ಒನ್ಸ್ ಮೋರ್ ಕೋರಿಕೆ ಗಿಟ್ಟಿಸಿಕೊಂಡರು. ತಂದೆಯೇ ಅವರ ಪ್ರಥಮ ಗುರು.
(ಮೊದಲ ಪುಟದಿಂದ) ಅವರಿಗೆ ಶಾಸ್ತಿçÃಯ ಸಂಗೀತ ಗಾಯಕಿಯಾಗುವ ಹಂಬಲವಿತ್ತು. ಆದರೆ ತಂದೆ ೪೧ನೇ ವರ್ಷದಲ್ಲೇ ತೀರಿಕೊಂಡಾಗ ೧೩ ವರ್ಷದ ಬಾಲಕಿ ಲತಾ ಹೆಗಲ ಮೇಲೆ ಮನೆಯ ಜವಾಬ್ದಾರಿ ಬಿತ್ತು. ತಾಯಿ, ೩ ಜನ ತಂಗಿಯರು, ಒಬ್ಬ ತಮ್ಮ, ಇವರುಗಳ ದೊಡ್ಡ ಪರಿವಾರವನ್ನು ನೋಡಿಕೊಳ್ಳಬೇಕಾಗಿ ಬಂತು. ಅವರು ಮರಾಠಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದರು. ೧೯೪೨ರಲ್ಲಿ ಪ್ರಾರಂಭ ಮಾಡಿದ ಮರಾಠಿ ಚಿತ್ರ ಕಿತೀ ಹಸಾಲ್ನಲ್ಲಿ ಅವರು ಹಾಡಿದರೂ ಕಾರಣಾಂತರಗಳಿAದ ಅವರ ಗಾಯನ ಸೇರ್ಪಡೆಯಾಗಲಿಲ್ಲ. ‘ಮಂಗಳಗೌರ್' ಚಿತ್ರದಲ್ಲಿ ನಟಿಸಿದ್ದರು. ೧೯೪೭ರಲ್ಲಿ ಹಿಂದಿ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡುವ ಅವಕಾಶ ಸಿಕ್ಕಿತು. ‘ಆಪ್ ಕಿ ಸೇವಾಮೆ', ‘ಪಾಂ ಲಾಗೂ ಕರ್ ಚೋರಿರೇ' ಎಂಬ ಹಾಡುಗಳನ್ನು ಹಾಡಿದರು. ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.
ಲತಾ ಅವರು ಬಹುಶಃ ಹಿಂದಿಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಇದಕ್ಕೆ ಒಂದೇ ಅಪವಾದವೆಂದರೆ ಓ.ಪಿ. ನಯ್ಯರ್. ಅದೇ ರೀತಿ ಅವರೊಂದಿಗೆ ಹಿಂದಿಯ ಪ್ರತಿಯೊಬ್ಬ ಗಾಯಕನ ಜೊತೆಯೂ ಹಾಡಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ನಟಿಯರಿಗಾಗಿ ಲತಾ ಹಾಡಿದ್ದಾರೆ. ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್... ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಅವರು ಹಾಡಿದ್ದಾರೆ. ಲತಾ ಅವರು ವಿವಾಹವಾಗಲಿಲ್ಲ. ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿರುವುದು ಒಂದು ವಿಶೇಷ.
೧೯೬೨ರ ಚೀನಾ-ಭಾರತ ಯುದ್ಧದಲ್ಲಿ ಭಾರತದ ನೂರಾರು ಸೈನಿಕರು ಹುತಾತ್ಮರಾದರು. ಇವರ ನೆನಪಿನಲ್ಲಿ ಒಂದು ವಿಶೇಷ ಗೀತೆಯನ್ನು ಪ್ರದೀಪ್ ಎಂಬ ಕವಿ ರಚಿಸಿದರು. ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು ೧೯೬೩ರ ಜನವರಿ ೨೬ ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು. ‘ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ...’ ಎಂದು ಪ್ರಾರಂಭವಾಗುವ ಗೀತೆಯನ್ನು ಕೇಳಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಿನಲ್ಲಿ ನೀರಾಡಿತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಕಾರ್ಯಕ್ರಮದ ನಂತರ ಮಾತಾಡಿ ‘ನೀನು ನನ್ನನ್ನು ಅಳಿಸಿಬಿಟ್ಟೆ’ ಎಂದು ಭಾವುಕರಾಗಿ ಹೇಳಿದ್ದರಂತೆ. ಈ ಹಾಡನ್ನು ಪ್ರತೀ ವರ್ಷ ಜನವರಿ ೨೬ ರಂದು ಸಮಾರಂಭದಲ್ಲಿ ಕೇಳಬಹುದಾಗಿದೆ.
ದೇಶದಲ್ಲಿ ಸುಮಾರು ೭ ದಶಕಗಳ ಕಾಲ ತಮ್ಮ ಗಾಯನ ಸುಧೆಯನ್ನು ಉಣಿಸಿದ ಲತಾ ಅವರಿಗೆ ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ ೬ ವಿಶ್ವವಿದ್ಯಾಲಯಗಳು ಗೌರವ ಡಾಕ್ಟೊರೇಟ್ ನೀಡಿವೆ. ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಭಾರತರತ್ನ, ಫ್ರಾನ್ಸ್ ಸರ್ಕಾರ ನೀಡುವ ‘ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ೧೯೭೪ರ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಆವೃತ್ತಿಯು ಲತಾ ಮಂಗೇಶ್ಕರ್ ಅವರನ್ನು ಅತಿ ಹೆಚ್ಚು ರೆಕಾರ್ಡ್ ಮಾಡಿದ ಕಲಾವಿದೆ ಎಂದು ಪಟ್ಟಿ ಮಾಡಿದೆ. ಅನಾರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಲತಾ ಮಂಗೇಶ್ಕರ್ ಅವರು ೨೦೧೫ರ ನಂತರ ಅವರು ಹಾಡುವುದನ್ನೇ ನಿಲ್ಲಿಸಿದರು. ಅವರ ಕೊನೆಯ ಹಾಡು ೨೦೧೫ರಲ್ಲಿ ರೆಕಾರ್ಡ್ ಮಾಡಲಾಗಿತ್ತು. ಲತಾ ಅವರಂತಹ ಶ್ರೇಷ್ಟ ಗಾಯಕಿ ಹುಟ್ಟುವುದು ಬಹಳ ಅಪರೂಪ.
ಗಾಯನ ಕೋಗಿಲೆಯ ಗೌರವಾರ್ಥ ಕೇಂದ್ರ ಸರ್ಕಾರ, ರಾಜ್ಯ ಸರಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಕಾರಣಕ್ಕೆ ಮೈಸೂರು ಅರಮನೆಯಲ್ಲಿ ಪ್ರತಿನಿತ್ಯ ಸಂಜೆ ೭ ರಿಂದ ೮ ಗಂಟೆವರೆಗೆ ಧ್ವನಿ ಹಾಗೂ ದೀಪಾಲಂಕಾರವನ್ನು ಎರಡು ದಿನಗಳ ಕಾಲ ಕಡಿತಗೊಳಿಸಲಾಗಿದೆ ಎಂದು ಅರಮನೆಯ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಅಭಿಮಾನಿಗಳ ಕಂಬನಿ: ಗಾನಕೋಗಿಲೆ ಲತಾ ಅವರ ಸಾವಿಗೆ ಕಂಬಿನಿ ಮಿಡಿದು ಲಕ್ಷಾಂತರ ಅಭಿಮಾನಿಗಳು ವಾಟ್ಸ್ ಅಪ್, ಇನ್ಸಾ÷್ಟಗ್ರಾಂ ಮತ್ತು ಫೇಸ್ ಬುಕ್ನಲ್ಲಿ ಶೋಕ ಸಂದೇಶಗಳನ್ನು ಹಂಚಿಕೊಳ್ಳುತಿದ್ದಾರೆ. ಅಭಿಮಾನಿಗಳು ಲತಾ ಜತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಕೂಡ ನೆನಪಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರಿಗೂ ಕೆಲ ವಿಷಯಗಳಲ್ಲಿ ಸಾಮ್ಯತೆ ಇರುವುದೇ ಅಭಿಮಾನಿಗಳ ಈ ನಡೆಗೆ ಕಾರಣವಾಗಿದೆ.
ಇಬ್ಬರ ಹೆಸರಲ್ಲೂ ಒಂದು ರೀತಿಯಲ್ಲಿ ಸಂಬAಧವಿದೆ. ಅದೇನೆಂದರೆ ಂಖಿAಐ ಎಂಬುದನ್ನು ತಿರುಗಿಸಿ ಬರೆದರೆ ಐಂಖಿA ಎಂದಾಗುತ್ತದೆ ಎಂಬುದಾಗಿ ಕೆಲವರು ಬರೆದುಕೊಂಡಿದ್ದು ಒಮ್ಮೆ ಅಟಲ್ ಬಿಹಾರಿ ವಾಜಪೇಯಿ ಅವರೇ ಈ ವಿಷಯ ಪ್ರಸ್ತಾಪಿಸಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ. ಅಟಲ್ ಅವರು ಒಮ್ಮೆ ಲತಾ ಮಂಗೇಶ್ಕರ್ ಅವರ ಜತೆ ಮಾತನಾಡುತಿದ್ದಾಗ ಹೀಗೆ ಹೇಳಿದ್ದರು. ‘ನೀವು ತಿರುಗಿದರೆ ನಾನು..’ ಎಂದಾಗ ಅಟಲ್ರನ್ನು ಲತಾ ಮಂಗೇಶ್ಕರ್ ಅಚ್ಚರಿಯಿಂದ ನೋಡಿದ್ದರು. ಆಗ ಐಂಖಿA ಉಲ್ಟಾ ಆಗಿಸಿದರೆ ಂಖಿAಐ ಆಗುತ್ತದೆ ನೋಡಿ’ ಎಂದು ಅಟಲ್ ಹೇಳಿದ್ದರು ಎಂಬುದನ್ನು ಕೆಲವರು ಸ್ಮರಿಸಿಕೊಂಡಿದ್ದಾರೆ.
ಕವಿಯೂ ಆಗಿದ್ದ ಅಟಲ್ ಅವರ ‘ಥನ್ ಗಯಿ, ಮೌಥ್ ಸೆ ಥನ್? ಗಯಿ’ ಎಂಬ ಕವಿತೆಯನ್ನು ಲತಾ ಹಾಡಿದ್ದರು. ಮತ್ತೊಂದು ಸಾಮ್ಯತೆ ಎಂದರೆ ಈ ಇಬ್ಬರೂ ಅವಿವಾಹಿತರಾಗಿದ್ದು ಇಬ್ಬರೂ ಭಾರತ ರತ್ನ ಪುರಸ್ಕೃತರು. ಅಟಲ್ ಅವರು ಪ್ರಧಾನಿ ಆಗಿದ್ದಾಗಲೇ ಲತಾ ಭಾರತ ರತ್ನ ಪುರಸ್ಕೃತರಾಗಿದ್ದರು.
ಲತಾ ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಹೂ ಗುಚ್ಚ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
-ಕೋವರ್ಕೊಲ್ಲಿ ಇಂದ್ರೇಶ್