ಮಡಿಕೇರಿ, ಫೆ. ೭: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬರುವ ಸ್ವತ್ತಿನ ಆಸ್ತಿ ತೆರಿಗೆ, ನೀರಿನ ತೆರಿಗೆ, ನಗರಸಭೆ ಮಳಿಗೆಗಳ ಮಾಸಿಕ ಬಾಡಿಗೆ, ಜಾಹೀರಾತು ಫಲಕದ ಶುಲ್ಕಗಳನ್ನು ಪಾವತಿಸದೆ ಬಾಕಿ ಇಟ್ಟು ಕೊಂಡಿರುವವರು ಹಿಂದಿನ ಬಾಕಿ ಸೇರಿದಂತೆ ಕೂಡಲೇ ನಗರಸಭೆಗೆ ಬಂದು ಆನ್‌ಲೈನ್ ಚಲನ್ ಪಡೆದು ಪಾವತಿಸಿ ಸ್ವೀಕೃತಿ ಪಡೆಯುವುದು. ತಪ್ಪಿದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ರಲ್ಲಿ ಪ್ರದತ್ತವಾದ ಅಧಿಕಾರದಂತೆ ಇದನ್ನೇ ಅಂತಿಮ ಸೂಚನೆ ಎಂದು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನೀರಿನ ತೆರಿಗೆ ಬಾಕಿ ಇದ್ದವರು ಪಾವತಿ ಮಾಡದೆ ಇದ್ದಲ್ಲಿ ಯಾವುದೇ ಸೂಚನೆ ನೀಡದೆ ಸಂಪರ್ಕ ಕಡಿತಗೊಳಿಸಲಾಗುವುದು.ಆಸ್ತಿ ತೆರಿಗೆ ಪಾವತಿ ಮಾಡದೆ ಬಾಕಿ ಇಟ್ಟುಕೊಂಡಲ್ಲಿ ಮುನ್ಸಿಪಲ್ ಕಾಯಿದೆ ಕಲಂ ೧೪೨(೩)ರಂತೆ ಕ್ರಮ ಕೈಗೊಳ್ಳಲಾಗುವುದು. ಮಳಿಗೆ ಬಾಡಿಗೆ ಬಾಕಿ ಇದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಮಳಿಗೆ ಮುಚ್ಚಲು ಕ್ರಮ ವಹಿಸಲಾಗುವುದು. ಜಾಹೀರಾತು ಫಲಕಗಳ ಶುಲ್ಕ ಪಾವತಿ ಮಾಡದೇ ಇದ್ದಲ್ಲಿ ತೆರವುಗೊಳಿಸಲಾಗುವುದು ಎಂದು ನಗರಸಭಾ ಆಯುಕ್ತ ರಾಮದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.