ಕೂಡಿಗೆ, ಫೆ. ೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಅಂಗಡಿ ಮಳಿಗೆಗಳಿಗೆ ಲೈಸನ್ಸ್ ನೀಡುವ ವಿಷಯವಾಗಿ ನಡೆಸಿದ ತುರ್ತು ಸಭೆಯು ಗೊಂದಲದ ಗೂಡಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆರಂಭಗೊAಡು ಕೆಲ ಸಮಯವರೆಗೆ ವಸತಿ ರಹಿತರಿಗೆ ನಿವೇಶನ ಹಂಚುವ ವಿಷಯ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.
ನಂತರ ಮದಲಾಪುರದಲ್ಲಿ ನಾರಾಯಣ ಎಂಬವರು ನಿರ್ಮಾಣ ಮಾಡಿರುವ ಅಂಗಡಿ ಮಳಿಗೆಗಳಿಗೆ ಪರವಾನಿಗೆ (ಲೈಸನ್ಸ್) ನೀಡುವ ವಿಷಯ ಸಭೆಯಲ್ಲಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಪ್ರಸ್ತಾಪನೆ ಮಾಡಿದಾಗ ಕೆಲ ಸದಸ್ಯರುಗಳು ಮತ್ತು ಅಧ್ಯಕ್ಷೆ ನಡುವೆ ಮಾತಿನ ಚಕಮಕಿ ನಡೆದು, ಲೈಸನ್ಸ್ ನೀಡುವ ವಿಷಯದಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ೧೫ ಜನ ಸದಸ್ಯರಲ್ಲಿ ಇಬ್ಬರನ್ನು ಹೊರತುಪಡಿಸಿ ಅಧ್ಯಕ್ಷೆ ಉಪಾಧ್ಯಕ್ಷೆ ಸೇರಿದಂತೆ ಉಳಿದ ೧೨ ಜನ ಸದಸ್ಯರು ಅಭಿವೃದ್ಧಿ ಅಧಿಕಾರಿ ಅಯಿಷಾ ಅವರನ್ನು ಅಂಗಡಿ ಮಳಿಗೆಗೆ ಲೈಸನ್ಸ್ ಕೊಡುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಹಾಜರಿದ್ದ ಅಭಿವೃದ್ಧಿ ಅಧಿಕಾರಿ ಅಯಿಷಾ ಸದಸ್ಯರು ಲೈಸನ್ಸ್ ನೀಡುವ ಬಗ್ಗೆ ಒತ್ತಡ ತಂದರೂ ಸಹ ಕಾನೂನಾತ್ಮಕವಾಗಿ ನೀಡಲು ಸಾಧ್ಯವಿಲ್ಲ. ಈ ಮಳಿಗೆಗಳ ನಿರ್ಮಾಣದ ಸಂದರ್ಭದಲ್ಲಿ ಗ್ರಾ.ಪಂ.ನಿAದ ಅನುಮತಿ ಪಡೆದಿಲ್ಲ. ಅಲ್ಲದೆ ಜಾಗದ ಮಾಲೀಕರಿಗೆ ಈಗಾಗಲೇ ಮೂರು ಬಾರಿ ನೋಟೀಸ್ ನೀಡಲಾಗಿದೆ. ಅಲ್ಲದೆ ಈ ಮಳಿಗೆಗಳ ವಿಷಯದ ಬಗ್ಗೆ ಕಂದಾಯ ಇಲಾಖೆ ಮತ್ತು ಸಂಬAಧಿಸಿದ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದಾರೆ. ಅದರಿಂದಾಗಿ ತಾಲೂಕು ಮಟ್ಟದ ಅಧಿಕಾರಿಗಳ ಗಮನ ತಂದು ಅವರ ಸೂಚನೆಯಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು. ಲೈಸನ್ಸ್ ನೀಡದಂತೆ ಗ್ರಾಮ ಸದಸ್ಯರಾದ ಟಿ.ಪಿ. ಹಮೀದ್ ಅರುಣ್ ರಾವ್ ನವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.
ಲೈಸೆನ್ಸ್ ನೀಡುವಂತೆ ಜಯಶೀಲಾ, ಜಯಶ್ರೀ, ರವಿ, ಪಲ್ಲವಿ ಒತ್ತಾಯ ಮಾಡಿದರು. ಆ ಸಂದರ್ಭದ ಸಭೆಯಲ್ಲಿ ಅಧ್ಯಕ್ಷೆ ಮತ್ತು ಕೆಲ ಸದಸ್ಯರುಗಳ ನಡುವೆ ಎರಡು ಗಂಟೆಗಳ ಕಾಲ ಮಾತಿನ ಚಕಮಾಕಿ ನಡೆದು ಅಭಿವೃದ್ಧಿ ಅಧಿಕಾರಿ ಲೈಸನ್ಸ್ ಕೂಡುವಂತೆ ಒತ್ತಡ ಏರಿದರು. ಗೊಂದಲ ಏರ್ಪಟ್ಟ ಹಿನ್ನೆಲೆ ಸ್ವಲ್ಪ ಸಮಯದವರೆಗೆ ಸಭೆಯನ್ನು ಮುಂದೂಡಲಾಗಿತು.
ಅರ್ಧ ಗಂಟೆಯ ನಂತರ ಸಭೆ ಸೇರಿ ಚರ್ಚೆಗಳು ಆರಂಭವಾಗಿ ಮೊದಲಿನಂತೆಯೇ ಅಧ್ಯಕ್ಷೆ - ಉಪಾಧ್ಯಕ್ಷೆ ಕೆಲ ಸದಸ್ಯರು ಕೂಗಾಟ ಆರಂಭ ಮಾಡಿದರು. ಆದರೆ ಅಭಿವೃದ್ಧಿ ಅಧಿಕಾರಿ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆಯಂತೆ ನೀಡುವುದಾಗಿ ನಿರ್ಧರಿಸಿದರು. ಅಧ್ಯಕ್ಷೆ ಮತ್ತು ಸದಸ್ಯರಾದ ಟಿ.ಪಿ. ಹಮೀದ್, ಅರುಣ್ ರಾವ್ ನಡುವೆ ಮಾತಿನ ಚಕಮಕಿ ನಡೆದು ಏಕವಚನ ಪದಗಳ ಬಳಕೆಯಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ ಸದಸ್ಯರುಗಳಾದ ಕೆ.ಎಸ್. ಶಿವಕುಮಾರ್, ವಾಣಿ, ರತ್ನಮ್ಮ, ರವಿ, ಜಯಶ್ರೀ, ಜಯಶೀಲ, ಪಲ್ಲವಿ, ಟಿ.ಪಿ. ಹಮೀದ್, ಅರುಣ್ರಾವ್, ಲಕ್ಷಿö್ಮ, ಅನಂತ, ಚಂದ್ರು ಸೇರಿದಂತೆ ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ಹಾಜರಿದ್ದರು.