ನಾಪೋಕ್ಲು, ಫೆ. ೭: ಆಟೋ ರಿಕ್ಷಾ ಹಾಗೂ ಬಸ್ ನಡುವೆ ನಡೆದ ಅಪಘಾತದಲ್ಲಿ ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ನಾಪೋಕ್ಲು ಪಟ್ಟಣದ ನೂರಂಬಡ ಬಳಿ ನಡೆದಿದೆ. ಮಧ್ಯಾಹ್ನ ೨.೩೦ರ ಸಮಯದಲ್ಲಿ ಕೊಳಕೇರಿಯಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುತ್ತಿದ್ದ ಆಟೋ ರಿಕ್ಷಾಕ್ಕೆ ನೂರಂಬಡ ಮಠದ ಹತ್ತಿರದ ತಿರುವಿನಲ್ಲಿ ವೀರಾಜಪೇಟೆಗೆ ಹೋಗುವ

(ಮೊದಲ ಪುಟದಿಂದ) ಖಾಸಗಿ ಬಸ್ (ಕೆ.ಎ.೨೦ ಸಿ.೭೭೯) ಡಿಕ್ಕಿಯಾದ ಪರಿಣಾಮ ಆಟೋ ರಿಕ್ಷಾ (ಎ.ಕೆ. ೧೨ ಎ. ೮೭೪೩) ನಜ್ಜುಗುಜ್ಜಾಗಿದ್ದು, ಆಟೋ ಚಾಲಕ ಕೆ.ಆರ್. ನಿಶಾಂತ್ ತಲೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

ಅದರAತೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅಪ್ಪಾಜಿ ಎಂಬಾತನಿಗೂ ತಲೆಗೆ ಗಾಯವಾಗಿದ್ದು ಇಬ್ಬರನ್ನು ನಾಪೋಕ್ಲು ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಸಿಬ್ಬಂದಿಗಳು ಭೆೆÃಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. -ದುಗ್ಗಳ