
ಕರಿಕೆ, ಫೆ. ೬: ಪ್ರಧಾನ ಮಂತ್ರಿಗಳ ಮಹತ್ವಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಮನೆ ಮನೆ ಕುಡಿಯುವ ನೀರಿನ ಯೋಜನೆಗೆ ಸಂಸದ ಪ್ರತಾಪ್‌ಸಿಂಹ ಹಾಗೂ ಶಾಸಕ ಕೆ .ಜಿ. ಬೋಪಯ್ಯ ಚೆತ್ತುಕಾಯದಲ್ಲಿ ಭೂಮಿ ಪೂಜೆ ನೆರವೇರಿಸಿ, ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಿದ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿದರು.
ನಂತರ ಮಾತನಾಡಿದ ಸಂಸದರು, ೨೦೧೪ ರಲ್ಲಿ ಪ್ರಧಾನಿ ಮೋದಿ ಅವರು, ಮನೆ ಮನೆಗೆ ಉಚಿತ ವಿದ್ಯುತ್ ಹಾಗೂ ಉಜ್ವಲ್ ಯೋಜನೆಯಡಿಯಲ್ಲಿ ಮನೆ ಮನೆಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ಉದ್ದೇಶಿಸಿದ್ದರು. ೨೦೧೯ ರಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿ ಇದೀಗ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರಿನ ಯೋಜನೆಯಾದ ಪ್ರಧಾನ ಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ದೇಶದ ಎರಡು ಲಕ್ಷದ ಅರವತ್ತೆರಡು ಸಾವಿರ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ.
ಈ ನಿಟ್ಟಿನಲ್ಲಿ ಕರಿಕೆಯಲ್ಲಿ ರೂ. ೧.೪೮ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು ಮುಂದೆ ಹಂತ ಹಂತದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಗ್ರಾಮದ ಜನತೆ ಕೇಂದ್ರ ಸರಕಾರದ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸಾಕಷ್ಟು ಅನುದಾನ ಗ್ರಾಮೀಣ ಭಾಗವಾದ ಕರಿಕೆಗೆ ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ವಿಶೇಷ ಆಸಕ್ತಿ ವಹಿಸಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಜನತೆ ಮೊಬೈಲ್ ಸಂಪರ್ಕ ಟವರ್ ಒದಗಿಸುವಂತೆ ಮನವಿ ಸಲ್ಲಿಸಿದಾಗ ಮನವಿ ಸ್ವೀಕರಿಸಿದ ಸಂಸದರು ಟವರ್ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ಅಲ್ಲದೇ ಕರಿಕೆ ಭಾಗಮಂಡಲ ಅಂತರ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಬಗ್ಗೆ ಕೂಡ ಕಾನೂನಿನ
(ಮೊದಲ ಪುಟದಿಂದ) ಚೌಕಟ್ಟಿನ ಒಳಗೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು. ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ನರೇಂದ್ರ ಮೋದಿ ಅವರ ಕನಸಿನ ಕೂಸು. ಇದೀಗ ರಾಷ್ಟçದ ಮೂಲೆ ಮೂಲೆಗಳಲ್ಲಿ ಈ ಯೋಜನೆ ಆರಂಭವಾಗಿದೆ.
ಅಲ್ಲದೆ ರಾಜ್ಯ ಸರಕಾರದಿಂದ ಎನ್‌ಡಿಆರ್‌ಎಫ್, ೫೦-೫೪, ಲೋಕೋಪಯೋಗಿ ಇಲಾಖೆ, ಮಳೆಹಾನಿಯಡಿಯಲ್ಲಿ ಸೇರಿದಂತೆ ರೂ.೪೫೦ ಲಕ್ಷಗಳ ಅನುದಾನ ಬಿಡುಗಡೆಯಾಗಿ ಕೆಲವು ಕಾಮಗಾರಿ ಆರಂಭವಾಗಿದ್ದು, ಇನ್ನೂ ಕೆಲವು ಕಾಮಗಾರಿ ಸದ್ಯದಲ್ಲಿಯೇ ಆರಂಭಿಸಲಾಗುವುದೆAದರಲ್ಲದೆ ೯೪ಸಿ ಹಾಗೂ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಹಕ್ಕ ಪತ್ರ ನೀಡಲು ಸಿಎನ್‌ಡಿ ಜಾಗದ ನೆಪದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ನಡುವೆ ಗೊಂದಲವಿದ್ದು ಫೆಬ್ರವರಿ ೧೬ರಂದು ಜಂಟಿ ಸರ್ವೆ ನಡಯಲಿದೆ. ಹದ್ದು ಬಸ್ತು ಗುರುತಿಸಿ ಕೂಡಲೇ ಹಕ್ಕು ಪತ್ರ ಒದಗಿಲು ಕ್ರಮ ವಹಿಸಲಾಗುವುದೆಂದರು.ಈ ಬಾರಿ ರಾಜ್ಯದಲ್ಲಿ ಅತೀ ಹೆಚ್ಚು ಮಳೆಹಾನಿ ಬೆಳೆ ಪರಿಹಾರ ಒದಗಿಸಲು ಅನುದಾನ ಕೊಡಗಿಗೆ ಬಿಡುಗಡೆಯಾಗಿದ್ದು, ನೇರವಾಗಿ ರೈತರ ಖಾತೆಗೆ ಪರಿಹಾರ ಹಣದ ಸಂದಾಯವಾಗುತ್ತಿದೆ ಎಂದರು. ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುದುಪಜೆ ಕಲ್ಪನಾ ಜಗದೀಶ್, ಉಪಾಧ್ಯಕ್ಷ ಬಾಲಚಂದ್ರ ನಾಯರ್, ಅಭಿವೃದ್ಧಿ ಅಧಿಕಾರಿ ಗಣಪತಿ, ಜಿ.ಪಂ. ಮಾಜಿ ಸದಸ್ಯೆ ಕವಿತಾ ಪ್ರಭಾಕರ್, ಪ್ರಮುಖರಾದ ಹೊಸೂರು ಸತೀಶ್ ಕುಮಾರ್, ಹೊಸಮನೆ ಹರೀಶ್, ಕೋಡಿ ಪೊನ್ನಪ್ಪ, ಗ್ರಾ.ಪಂ.ಸದಸ್ಯರಾದ ಕೆ.ಎ. ನಾರಾಯಣ, ದೀಪಿಕಾ ದಯಾನಂದ ಸೇರಿದಂತೆ ಗ್ರಾಮದ ಪ್ರಮುಖ ರು ಗ್ರಾಮಸ್ಥರು ಹಾಜರಿದ್ದರು.