ಮಡಿಕೇರಿ, ಫೆ. ೬: ನಗರದ ಗಣಪತಿ ಬೀದಿಯಲ್ಲಿರುವ ಬದ್ರಿಯ ಜುಮ್ಮಾ ಮಸೀದಿ ವತಿಯಿಂದ ನೂತನವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಕಟ್ಟಡಕ್ಕೆ ಜಿಲ್ಲಾ ಉಪಖಾಝಿ ಹಾಗೂ ಕೇಂದ್ರ ಮುಷಾವರ್ ಸದಸ್ಯ ಎಂ. ಅಬ್ದುಲ್ಲ ಫೈಯಿ ಶಿಲನ್ಯಾಸ ನೆರವೇರಿಸಿದರು.ಮಸೀದಿ ಆವರಣದಲ್ಲಿರುವ ೭ ಸೆಂಟ್ ಜಾಗದಲ್ಲಿ ೭೦ ಲಕ್ಷ ವೆಚ್ಚದಲ್ಲಿ ಬದ್ರಿಯಾ ಜಮಾ ಮಸೀದಿ ವತಿಯಿಂದ ಮದರಸ ಹಾಗೂ ಸಂಕೀರ್ಣ ನಿರ್ಮಾಣವಾಗುತ್ತಿದೆ.

ಕಾರ್ಯಕ್ರಮದಲ್ಲಿ ಖತೀಬರಾದ ಅಬುಬೂಕ್ಕರ್ ಸಿದ್ದೀಕ್ ಧರಿಮಿ ಪ್ರಾರ್ಥನೆ ಸಲ್ಲಿಸಿದರು. ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಮೀನ್ ಮೊಹ್ಸಿನ್ ಅಧ್ಯಕ್ಷತೆ ವಹಿಸಿದ್ದರು.

ಉಪಖಾಝಿ ಶಾದುಲಿ ಫೈಝಿ, ಮಾಜಿ ಶಾಸಕ ಇಬ್ರಾಯಿಂ, ನಗರಸಭಾ ಸದಸ್ಯ

(ಮೊದಲ ಪುಟದಿಂದ) ಮನ್ಸೂರ್ ಅಲಿ, ಬಷೀರ್, ಉದ್ಯಮಿಗಳಾದ ಹಮೀದ್, ರತೀಶ್, ರತಿಕೇಶ್, ವಾಸು, ಇಂಜಿನಿಯರ್ ವಿನು ಬೋಪಯ್ಯ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಂ. ತಮ್ಲಿಕ್ ಧಾರಮಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಫಾರೂಕ್ ವಂದಿಸಿದರು.