ಸೋಮವಾರಪೇಟೆ, ಫೆ. ೪: ಕೇಂದ್ರ ಸರ್ಕಾರ ದಿಂದ ಆಯೋಜನೆ ಗೊಂಡಿರುವ ೨೦೨೧-೨೨ನೇ ಸಾಲಿನ ಇನ್ ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ೯ನೇ ತರಗತಿ ವಿದ್ಯಾರ್ಥಿಗಳಾದ ಬಿ.ಬಿ. ನೇಹ, ಎಸ್.ಎನ್. ಧನ್ಯ, ಬಿ.ಎಸ್. ಚಿನ್ಮಯಿ ಅವರುಗಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಜಯಗಳಿಸಿ, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.