ಮಹಾಭಾರತ ವನಪರ್ವದಲ್ಲಿ ಭೀಷ್ಮಾಚಾರ್ಯರ ಕೋರಿಕೆಯಂತೆ ಪುಲಸ್ತ್ಯ ಮಹರ್ಷಿಗಳು ನಾನಾ ತೀರ್ಥಗಳ ಮಹಾತ್ಮೆಯನ್ನು ವಿವರಿಸಿ ಹೇಳುತ್ತಾರೆ. ಆ ಸಂದರ್ಭ ಸಪ್ತ ಪವಿತ್ರ ನದಿಗಳಲ್ಲಿ ಪ್ರಮುಖಳಾದ ಕಾವೇರಿ ಕುರಿತಾಗಿ ಹೀಗೆ ಹೇಳುತ್ತಾರೆ;
ತತೋ ಗಚ್ಛೇತ ಕಾವೇರೀಂ ವೃತಾಮಪ್ಸರಸಾಂ ಗಣೈ: ತತ್ರ ಸ್ನಾತ್ವಾ ನರೋ ರಾಜನ್ಗೋಸಹಸ್ರಫಲಂ ಲಭೇತ್.
ಅರ್ಥ ಹೀಗಿದೆ: ಋಷಭ ಪರ್ವತದ ಯಾತ್ರೆಯನ್ನು ಮುಗಿಸಿಕೊಂಡು ಅಪ್ಸರೆಯರಿಂದ ಸಂಸೇವ್ಯಮಾನವಾದ ಕಾವೇರೀ ನದೀತೀರಕ್ಕೆ ಪ್ರಯಾಣ ಮಾಡಬೇಕು, ಆ ಪುಣ್ಯ ನದಿಯಲ್ಲಿ ಸ್ನಾನ ಮಾಡುವುದರಿಂದ ಸಹಸ್ರಗೋವು ಗಳನ್ನು ದಾನ ಮಾಡಿದ ಫಲವು ಲಭ್ಯವಾಗುತ್ತದೆ.
ಈ ಮೇಲಿನ ಋಷಿ ವಾಕ್ಯವನ್ನು ಗಮನಿಸುವಾಗ ಕೊಡಗಿನ ಕಾವೇರಿಯ ಮಹಿಮೆ ಮಹಾಭಾರತ ಕಾಲದಲ್ಲಿಯೂ ಅದ್ಭುತವಾಗಿತ್ತು ಎನ್ನುವದು ಸ್ಪಷ್ಟಗೊಳ್ಳುತ್ತದೆ. ಪುಣ್ಯ ಕಾಮಧೇನು ಹಾಗೂ ಗೋಮಾತೆ ಎಂದು ಕರೆಸಿಕೊಳ್ಳುವ ಒಂದು ಗೋವನ್ನು ದಾನ ಮಾಡಿದರೇ ಅನಂತ ಪುಣ್ಯ ಲಭ್ಯವಾಗುತ್ತದೆ ಎಂದು ಧಾರ್ಮಿಕ ಉದ್ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಗೋದಾನ ಮಾಡುವದರಿಂದ ಕೇವಲ ಏಕ ಫಲವಲ್ಲ, ಬಹು ಫಲವಿದೆ. ಗೋ ದಾನದಿಂದ ಋಷಿಗಳು ಪ್ರೀತರಾಗುತ್ತಾರೆ. ದೇವತೆಗಳು ಸುಪ್ರಸನ್ನಗೊಳ್ಳು ತ್ತಾರೆ. ಮಾತ್ರವಲ್ಲ, ಪಿತೃ ದೇವತೆಗಳು ಕೂಡ ಸಂತೃಪ್ತರಾಗುತ್ತಾರೆ ಎಂದು ಗ್ರಂಥಗಳಲ್ಲಿ ವಿವರಣೆಯಿದೆ. ಅಂತಹುದರಲ್ಲಿ ಕಾವೇರಿ ನದಿಯಲ್ಲಿ ಒಮ್ಮೆ ಸ್ನಾನ ಮಾಡುವುದರಿಂದ ಸಹಸ್ರ ಗೋವುಗಳನ್ನು ದಾನ ಮಾಡಿದ ಫಲ ಲಭ್ಯವಾಗುತ್ತದೆ ಎನ್ನುವುದು ಅತ್ಯಂತ ವಿಶಿಷ್ಟಕರವಾದುದು.
ಮತ್ತೊಂದೆಡೆ ಮೈಸೂರು ಮಾನಸ ಗಂಗೋತ್ರಿ ಪ್ರಕಟಿತ ಪುರಾಣ ನಾಮ ಚೂಡಾಮಣಿ ಗ್ರಂಥದಲ್ಲಿ ಈ ಉಲ್ಲೇಖವಿದೆ: ಪಾಂಡವ ಮಧ್ಯಮ ಅರ್ಜುನನು ತೀರ್ಥ ಯಾತ್ರೆಗೆ ತೆರಳಿದ್ದ ಸಂದರ್ಭ ಕಾವೇರಿ ನದಿಯಲ್ಲಿ ಸ್ನಾನ ಮಾಡಿದ್ದ. ಅಲ್ಲದೆ ಪಾಂಡವ ಜ್ಯೇಷ್ಠ ಯುಧಿಷ್ಠಿರನು ನಡೆÀಸಿದ ರಾಜಸೂಯ ಯಾಗದ ಸಂದರ್ಭ ಪಾಂಡವ ಚತುರ್ಥ ಸಹೋದರ ನಕುಲ ಕಾವೇರಿ ನದಿಯ ಬಳಿ ಆಗಮಿಸಿದ್ದ ಎಂಬ ಉಲ್ಲೇಖವಿದೆ. ಇದೇ ಗ್ರಂಥದಲ್ಲಿ ಕೊಡವ ಜನಾಂಗದವರು ಕಾವೇರಿಯನ್ನು ತಮ್ಮ ಕುಲ ದೈವವಾಗಿ ಪೂಜಿಸುತ್ತಾರೆ ಎಂಬ ಉಲ್ಲೇಖವಿದೆ. ಅಲ್ಲದೆ, ಕಾವೇರಿಯು ದಕ್ಷಿಣ ಗಂಗೆ ಎಂಬದಾಗಿ ಪ್ರಸಿದ್ಧಿ ಪಡೆದ ಒಂದು ಮಹಾ ನದಿಯಾಗಿದೆ ಎಂದು ಕೂಡ ವರ್ಣಿಸಲಾಗಿದೆ.
ಇದೇ ಅಲ್ಲದೆ, ದಿ. ಡಾ. ಕೆ. ಶಿವರಾಮ ಕಾರಂತ ಅವರು ಮುನ್ನುಡಿ ಬರೆದಿದ್ದ ಲೇಖಕ ಯಜ್ಞನಾರಾಯಣ ಉಡುಪ ಅವರು ಹೊರತಂದಿದ್ದ “ “ಪುರಾಣ ಭಾರತ ಬರೆದಿದ್ದ ಲೇಖಕ ಯಜ್ಞನಾರಾಯಣ ಉಡುಪ ಅವರು ಹೊರತಂದಿದ್ದ “ “ಪುರಾಣ ಭಾರತ ಕೋಶ” ಗ್ರಂಥದಲ್ಲಿ ಕಾವೇರಿಯ ಕುರಿತಾಗಿ ಈ ಉಲ್ಲೇಖವಿದೆ: ಕಾವೇರಿಗೆ ದಕ್ಷಿಣ ಗಂಗೆ ಎಂಬ ಹೆಸರಿದೆ. ಅರ್ಜುನನು ತೀರ್ಥ ಯಾತ್ರೆ ಕಾಲದಲ್ಲಿ ಕಾವೇರಿ ನದಿಯಲ್ಲಿ ಮಿಂದಿದ್ದನು. ನಕುಲನು ರಾಜಸೂಯ ಯಾಗ ಕಾಲದಲ್ಲಿ ದಿಗ್ವಿಜಯಕ್ಕೆ ಹೊರಟವನು ಕಾವೇರಿ ನದಿಯ ದಡಕ್ಕೆ ಬಂದಿದ್ದ ಎಂಬ ಮಾಹಿತಿಯಿದೆ.
ಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆಗಳು
ತಲಕಾವೇರಿ- ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರ, ಅಷ್ಟಬಂಧ ಮತ್ತು ಬ್ರಹ್ಮಕಲಶ ಪ್ರಕ್ರಿಯೆಗಳು ಹಿಂದಿನ ಕಾಲದಲ್ಲಿ ಸಕಾಲಿಕವಾಗಿ ನಡೆಯಲೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿಯಷ್ಟೇ ಈ ಧಾರ್ಮಿಕ ವಿಧಿ ವಿಧಾನಗಳು ನಡೆದಿವೆ. ತಲಕಾವೇರಿಯಲ್ಲಿ 1974 ರಲ್ಲಿ ಒಮ್ಮೆ ಪ್ರಾಚೀನ ದೇಗುಲಗಳ ನವೀಕರಣ ಮತ್ತು ಬ್ರಹ್ಮ ಕಲಶ ಕಾರ್ಯಗಳು ಜರುಗಿದ್ದವು. ಭಾಗಮಂಡಲದಲ್ಲಿ 1790 ರಲ್ಲಿ ವೀರರಾಜನ ಆಡಳಿತ ಕಾಲದಲ್ಲಿ ಬ್ರಹ್ಮಕಲಶ ನಡೆದಿತ್ತು.
ಕೊಡಗು ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಸಮಿತಿಯು ಅಸ್ತಿತ್ವದಲ್ಲಿದ್ದಾಗ (1885 ರಿಂದ 2013ರ ತನಕ) ಇದ್ದ ಕೊಡಗು ಜಿಲ್ಲೆಗೆ ಸೀಮಿತವಾದ ಈ ಕಾಯ್ದೆಯು ‘‘ಛಿooಡಿg ಖಿemಠಿಟe ಈuಟಿಜ ಛಿomiಣಣee ಚಿಛಿಣ 1956’’ 2013ರ ತನಕವೂ ಚಾಲ್ತಿಯಲ್ಲಿತ್ತು. ಆ ಸಂದರ್ಭದಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ಸರ್ಕಾರದಿಂದ ನಾಮಕರಣಗೊಂಡ ಸಮಿತಿಯು ರಚನೆಯಾಗುತ್ತಿತ್ತು. ಕೊಡಗು ಜಿಲ್ಲಾಧಿಕಾರಿಗಳು ಈ ಸಮಿತಿಗೆ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರನ್ನು ಸ್ಥಳೀಯವಾಗಿ ಸರ್ಕಾರವೇ ನಾಮಕರಣ ಮಾಡುತ್ತಿತ್ತು, ಇದರೊಂದಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರನ್ನು ಸದಸ್ಯರÀನ್ನಾಗಿ ಉಳಿದಂತೆ ವಿವಿಧ ಕ್ಷೇತ್ರಗಳಿಂದ ಜನರನ್ನು ನಾಮಕರಣ ಮಾಡಲಾಗುತ್ತಿತ್ತು. ಜಿಲ್ಲೆಯ ರಾಜರ ಆಳ್ವಿಕೆಯ ದೇವಸ್ಥಾನಗಳಾದ ಭಾಗಮಂಡಲ, ತಲಕಾವೇರಿ, ಪಾಡಿ ಶ್ರೀ ಇಗ್ಗುತ್ತಪ್ಪ, ಪಾಲೂರು ಶ್ರೀ ಮಹಾಲಿಂಗೇಶ್ವರ, ಇರ್ಪು ಶ್ರೀರಾಮೇಶ್ವರ, ಪಾಲೂರು ಹರಿಶ್ಚಂದ್ರ, ಕೋಶ” ಗ್ರಂಥದಲ್ಲಿ ಕಾವೇರಿಯ ಕುರಿತಾಗಿ ಈ ಉಲ್ಲೇಖವಿದೆ: ಕಾವೇರಿಗೆ ದಕ್ಷಿಣ ಗಂಗೆ ಎಂಬ ಹೆಸರಿದೆ. ಅರ್ಜುನನು ತೀರ್ಥ ಯಾತ್ರೆ ಕಾಲದಲ್ಲಿ ಕಾವೇರಿ ನದಿಯಲ್ಲಿ ಮಿಂದಿದ್ದನು. ನಕುಲನು ರಾಜಸೂಯ ಯಾಗ ಕಾಲದಲ್ಲಿ ದಿಗ್ವಿಜಯಕ್ಕೆ ಹೊರಟವನು ಕಾವೇರಿ ನದಿಯ ದಡಕ್ಕೆ ಬಂದಿದ್ದ ಎಂಬ ಮಾಹಿತಿಯಿದೆ.
ಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆಗಳು
ತಲಕಾವೇರಿ- ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರ, ಅಷ್ಟಬಂಧ ಮತ್ತು ಬ್ರಹ್ಮಕಲಶ ಪ್ರಕ್ರಿಯೆಗಳು ಹಿಂದಿನ ಕಾಲದಲ್ಲಿ ಸಕಾಲಿಕವಾಗಿ ನಡೆಯಲೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿಯಷ್ಟೇ ಈ ಧಾರ್ಮಿಕ ವಿಧಿ ವಿಧಾನಗಳು ನಡೆದಿವೆ. ತಲಕಾವೇರಿಯಲ್ಲಿ 1974 ರಲ್ಲಿ ಒಮ್ಮೆ ಪ್ರಾಚೀನ ದೇಗುಲಗಳ ನವೀಕರಣ ಮತ್ತು ಬ್ರಹ್ಮ ಕಲಶ ಕಾರ್ಯಗಳು ಜರುಗಿದ್ದವು. ಭಾಗಮಂಡಲದಲ್ಲಿ 1790 ರಲ್ಲಿ ವೀರರಾಜನ ಆಡಳಿತ ಕಾಲದಲ್ಲಿ ಬ್ರಹ್ಮಕಲಶ ನಡೆದಿತ್ತು.
ಕೊಡಗು ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಸಮಿತಿಯು ಅಸ್ತಿತ್ವದಲ್ಲಿದ್ದಾಗ (1885 ರಿಂದ 2013ರ ತನಕ) ಇದ್ದ ಕೊಡಗು ಜಿಲ್ಲೆಗೆ ಸೀಮಿತವಾದ ಈ ಕಾಯ್ದೆಯು ‘‘ಛಿooಡಿg ಖಿemಠಿಟe ಈuಟಿಜ ಛಿomiಣಣee ಚಿಛಿಣ 1956’’ 2013ರ ತನಕವೂ ಚಾಲ್ತಿಯಲ್ಲಿತ್ತು. ಆ ಸಂದರ್ಭದಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ಸರ್ಕಾರದಿಂದ ನಾಮಕರಣಗೊಂಡ ಸಮಿತಿಯು ರಚನೆಯಾಗುತ್ತಿತ್ತು. ಕೊಡಗು ಜಿಲ್ಲಾಧಿಕಾರಿಗಳು ಈ ಸಮಿತಿಗೆ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರನ್ನು ಸ್ಥಳೀಯವಾಗಿ ಸರ್ಕಾರವೇ ನಾಮಕರಣ ಮಾಡುತ್ತಿತ್ತು, ಇದರೊಂದಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರನ್ನು ಸದಸ್ಯರÀನ್ನಾಗಿ ಉಳಿದಂತೆ ವಿವಿಧ ಕ್ಷೇತ್ರಗಳಿಂದ ಜನರನ್ನು ನಾಮಕರಣ ಮಾಡಲಾಗುತ್ತಿತ್ತು. ಜಿಲ್ಲೆಯ ರಾಜರ ಆಳ್ವಿಕೆಯ ದೇವಸ್ಥಾನಗಳಾದ ಭಾಗಮಂಡಲ, ತಲಕಾವೇರಿ, ಪಾಡಿ ಶ್ರೀ ಇಗ್ಗುತ್ತಪ್ಪ, ಪಾಲೂರು ಶ್ರೀ ಮಹಾಲಿಂಗೇಶ್ವರ, ಇರ್ಪು ಶ್ರೀರಾಮೇಶ್ವರ, ಪಾಲೂರು ಹರಿಶ್ಚಂದ್ರ, ರಾಜರ ಗದ್ದುಗೆ, ಶ್ರೀ ಓಂಕಾರೇಶ್ವರ ದೇವಸ್ಥಾನಗಳ ಆಡಳಿತವನ್ನು ಈ ಸಮಿತಿಯು ನಿರ್ವಹಿಸುತ್ತಿತ್ತು. ಪ್ರಮುಖವಾಗಿ, ಭಾಗಮಂಡಲ-ತಲಕಾವೇರಿ ದೇವಾಲಯಗಳಲ್ಲಿ ಅಂದು ವರಮಾನ ಜಾಸ್ತಿ ಇದ್ದು, 1992ರಲ್ಲಿ ಆಗಿನ ಸಮಿತಿಯು ಭಾಗಮಂಡಲ-ತಲಕಾವೇರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಉದ್ದೇಶಿಸಿತ್ತು. ಈ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಮತ್ತಿತರರನ್ನು ಭೇಟಿಯಾಗಿ, ಯೋಜನೆ ಮಾಡತೊಡಗಿದರು. ಧರ್ಮಾಧಿಕಾರಿಗಳು ಮತ್ತು ಕ್ಷೇತ್ರದ ತಂತ್ರಿಯವರು, ಖ್ಯಾತ ಶಿಲ್ಪ ಶಾಸ್ತ್ರಜ್ಞರಾದ ದಿ|| ಮುನಿಯಂಗಳ ಕೃಷ್ಣಭಟ್ರನ್ನು ಭೇಟಿಯಾಗಿ ಮೊದಲ ಹಂತವಾಗಿ ಅಷ್ಟಮಂಗಲ ಪ್ರಶ್ನೆಯನ್ನು ಭಾಗಮಂಡಲದಲ್ಲಿ ದಿವಂಗತ ಹೊಸೂರು ಜೋಯಪ್ಪರವರ ಒತ್ತಾಯದಲ್ಲಿ ಪ್ರಾರಂಭಿಸಲಾಯಿತು. ಸುಮಾರು 45 ದಿವಸಗಳ ಕಾಲ ನಿರಂತರವಾಗಿ ನಡೆದ ಅಷ್ಟಮಂಗಲ ಪ್ರಶ್ನೆಯನ್ನು ಖ್ಯಾತ ಜೋತಿಷ್ಯರಾದ ದಿ. ಅಚ್ಚಂಬೀಡು ನಾರಾಯಣ ಪೊದುವಾಳ್ ಮತ್ತು ಅವರ ತಂಡದವರು ನೆರವೇರಿಸಿ ಕೊಟ್ಟಿದ್ದರು. ತಲಕಾವೇರಿ-ಭಾಗಮಂಡಲದಲ್ಲಿ ಅದಕ್ಕಿಂತ 70 ವರ್ಷಗಳಿಗಿಂತ ಮೊದಲು ಬ್ರಹ್ಮಕಲಶ ನಡೆದಿದ್ದು, ಆ ಮಾಹಿತಿಯು ಕ್ಷೇತ್ರದ ತಂತ್ರಿಯವರಿಗೆ ತಿಳಿದಿದ್ದು ನಂತರದ ದಿನಗಳಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವುದೇ ಬ್ರಹ್ಮಕಲಶಗಳಾಗಲಿ, ವರ್ಷಂಪ್ರತಿ ಕಾವೇರಿ ತುಲಾಸಂಕ್ರಮಣ ಜಾತ್ರೆಯನ್ನು ಬಿಟ್ಟು ಯಾವುದೇ ದೊಡ್ಡ ಉತ್ಸವಗಳು ನಡೆದಿರಲಿಲ್ಲವೆಂಬ ಮಾಹಿತಿ ತಿಳಿಯಿತು.
ತಲಕಾವೇರಿ-ಭಾಗಮಂಡಲ ಕ್ಷೇತ್ರಗಳ ವಿಶೇಷ ಮಾಹಿತಿಯು ನಾಡಿನ ಜನತೆಗೆ ತಿಳಿದದ್ದೇ ಇದರಿಂದಾಗಿ ಎಂದು ಹೇಳಬಹುದು. ತಲಕಾವೇರಿ ಕ್ಷೇತ್ರದ ಮಹಿಮೆ, ಭಾಗಮಂಡಲ ಕ್ಷೇತ್ರದ ಮಹಿಮೆ, ಕ್ಷೇತ್ರವನ್ನು ಬೆಳಗಿಸಲು ಧಾರ್ಮಿಕ ಕಾರ್ಯವನ್ನು ಮಾಡಿದರೆ ಮಾತ್ರ ಮುಂದಕ್ಕೆ ಒಳಿತಾಗುವುದು ಎಂಬ ಮಹತ್ತರ ವಿಷಯಗಳು ತಿಳಿದಿರುವುದು ಇಲ್ಲಿ ಗಮನಾರ್ಹವಾಗಿದೆ.
ಹೀಗೆ 1992ರಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ತಲಕಾವೇರಿ, ಭಾಗಮಂಡಲ ಕ್ಷೇತ್ರಗಳ ಕೆಲವು ವಿಶೇಷ ಮಾಹಿತಿ ಈ ಕೆಳಗಿನಂತಿದೆ.
ಉಂಬಳಿಯಾಗಿ ಭೂಮಿ ಸ್ವೀಕಾರ ಮಾಡಿದ ಪರಿಚಾರಕರು ಅವರವರ ಪರಿಚಾರಕ ವೃತ್ತಿಯನ್ನು ಮಾಡಬೇಕು.
ರುದ್ರ ಪಾರಾಯಣ, ಸುಬ್ರಹ್ಮಣ್ಯ ಪಾರಾಯಣ, ವಿಷ್ಣು ಪಾರಾಯಣ, ಪಂಚಾಂಗ ಶ್ರವಣ, ಕೊಡೆ, ಕಟ್ಟಿಗೆ, ಅಷ್ಟಾವಧಾನದವರೂ, ನಾಲ್ಕು ಕುಟುಂಬದ ಅರ್ಚಕರೂ ಈ ಹಿಂದೆ ಇದ್ದರು.
ಗಣಪತಿ ಹೋಮ ಪ್ರತಿ ಪಕ್ಷದ ಚೌತಿಗೆ ಮಾಡಬೇಕು.
ದೇವಿ ಸೇವೆ, ಗಣಪತಿ ಹೋಮ, ಭಾಗ್ಯ ಸೂಕ್ತ, ಐಕ್ಕಮತ್ಯ, ಸೂಕ್ಷ್ಮ ವೇದ ಪಾರಾಯಣ ಮೊದಲಾದವುಗಳನ್ನು ಮಾಡಬೇಕು.
ಪೂಜಾ ಸಮಯದಲ್ಲಿ ತುಪ್ಪ ದೀಪ ಇಡಬೇಕು.
ಬಾಕಿ ಸಮಯದಲ್ಲಿ ಶುದ್ಧ ತಿಲ ತೈಲವನ್ನು ಉಪಯೋಗಿಸಬೇಕು.
ತಲಕಾವೇರಿಯಲ್ಲಿ ಪಾಯಸ ನೈವೇದ್ಯ ಬೇಕು.
ಭಾಗಮಂಡಲದಲ್ಲಿ ಪಾಯಸ ಮತ್ತು ಅಪ್ಪ ನೈವೇದ್ಯಗಳಾಗಬೇಕು.
ದೀಪದ ಬತ್ತಿಗಳನ್ನು ಪ್ರತಿ ದಿನವೂ ಬದಲಾಯಿಸಬೇಕು.
ಗಂಧ ಪ್ರಸಾದವಾಗಿ ಅಂಗಡಿಯಿಂದ ತಂದ ಕಳಭವನ್ನು ಉಪಯೋಗಿಸ ಬಾರದು. ಒಂದು ದಿವಸ ಉಪಯೋಗಿಸಿದ ಕಟ್ಟಿಗೆಯನ್ನು ಮರು ದಿವಸಕ್ಕೆ ಉಪಯೋಗಿಸಬಾರದು.
ಹಾಲ್ಪಾಯಸ ನೈವೇದ್ಯ, ಉದ್ದಿನವಡೆ ನೈವೇದ್ಯ ಬೇಕು. ನಾಳಿಕೇರ, ಹಾಲು, ಅನ್ನ, ತಾಂಬೂಲ, ತ್ರಿಮಧುರ ನೈವೇದ್ಯ ಬೇಕು. ಹೊದಳು (ಅರಳು) ನೈವೇದ್ಯ ಬೇಕು.
ಪುಷ್ಪಗಳನ್ನು ನೀರಿನಲ್ಲಿ ಮುಳುಗಿಸಿ ಉಪಯೋಗಿಸಬೇಕು.
ಪೂಜೆಗೆ ಅನರ್ಹ ಪುಷ್ಪಗಳನ್ನು ಉಪಯೋಗಿಸಬಾರದು.
ದೇವರಿಗೆ ಪ್ರತಿ ದಿನ ಒಂದು ಮಾಲೆಯಾದರೂ ಹಾಕಬೇಕು.
ಶ್ರೀ ವಿಷ್ಣು ದೇವರಿಗೆ ಪುರುಷ ಸೂಕ್ತದಿಂದ ಅಭಿಷೇಕ ಬೇಕು.
ತೀರ್ಥ ನದಿಯಿಂದ ಮೀನು ಹಿಡಿಯಬಾರದು. ಮೀನು ಪೂಜೆ ಮಾಡಿ ನೈವೇದ್ಯ ಕೊಡುವ ಕ್ರಮವಿದೆ. ಸ್ವರ್ಣರೇಖೆಯಿದ್ದ ಮೀನುಗಳು ಇದ್ದವು. ಬಾಹ್ಯಗೋಪುರವನ್ನು ರಾಜಗೋಪುರವಾಗಿ ಮಾಡಬೇಕು. ಬಾಹ್ಯಗೋಪುರಕ್ಕೆ ಬಾಗಿಲು ಬೇಕು. ರಾತ್ರಿ ಪೂಜೆಯಾದ ನಂತರ ಈ ಬಾಗಿಲುಗಳನ್ನು ಹಾಕಬೇಕು. ಹಿಂದಿನ ಕಾಲದಲ್ಲಿದ್ದ ಅನಘ್ರ್ಯ ವಸ್ತುಗಳ ನಷ್ಟ ಉಂಟಾಗಿದೆ.
ತಲಕಾವೇರಿಯಲ್ಲಿ ಮತ್ತು ಭಾಗಮಂಡಲದಲ್ಲಿ ಸ್ತ್ರೀಯರು ಷಷ್ಠಿ ವ್ರತಾನುಷ್ಠಾನ ಮಾಡಿ ದೇವರ ಅನುಗ್ರಹಕ್ಕೆ ಪಾತ್ರರಾದರೆ ಉತ್ತಮ ಸಂತಾನವುಂಟಾಗುತ್ತದೆ.
ಆಟಿ ಅಮಾವಾಸ್ಯೆ, ನವಾನ್ನ ಧರ್ನುವ್ರ್ಯತೀಪಾತ ಷಷ್ಠಿ, ಶಿವರಾತ್ರಿ, ವಸಂತೋತ್ಸವಗಳಲ್ಲಿ ಅನ್ನದಾನವಾಗುತ್ತಿತ್ತು. ಎಳ್ಳಮಾವಾಸ್ಯೆಯಲ್ಲಿ ತಲಕಾವೇರಿಯಲ್ಲಿ ಅನ್ನದಾನವಾಗುತ್ತಿತ್ತು. (ಮುಂದುವರಿಯುವುದು)
- ಜಿ. ರಾಜೇಂದ್ರ,
- ಸಂಪತ್ಕುಮಾರ್, ಭಾಗಮಂಡಲ.