ಗೋಣಿಕೊಪ್ಪ ವರದಿ, ಫೆ. ೫: ಕೋವಿಡ್ ಸಂಕಷ್ಟದ ಸಮಯದಲ್ಲಿ ಮಾರುಕಟ್ಟೆ ಕೌಶಲ್ಯ ವೃದ್ಧಿಸಿಕೊಳ್ಳಲು ಯುವ ಸಮೂಹ ತಂತ್ರಜ್ಞಾನದ ಪರಿಹಾರ ಕಂಡುಕೊಳ್ಳಬೇಕು ಎಂದು ಮೈಸೂರು ಕೃಷಿ ಜಂಕ್ಷನ್ ಸಂಸ್ಥೆ ಸಹ ಸಂಸ್ಥಾಪಕಿ ಡಾ. ಚೈತ್ರ ಭರತ್ ಸಲಹೆ ನೀಡಿದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಕೋವಿಡ್ ಸಂಕಷ್ಟದ ನಡುವೆ ನವೋದ್ಯಮಿಗಳಿಗೆ ಪೂರಕ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ವರು ಮಾತನಾಡಿದರು. ತಂತ್ರಜ್ಞಾನ ಬಳಸಿ ಜಾಗತಿಕ ಮಟ್ಟದಲ್ಲಿ ಮಾರಾಟ ವ್ಯವಸ್ಥೆಗೆ ಯುವ ಸಮೂಹ ತಮ್ಮ ಕೌಶಲ್ಯವನ್ನು ತೋರಿಸುವಂತಾಗಿದೆ. ಪ್ರತಿ ಹೆಜ್ಜೆಯಲ್ಲೂ ವಿಭಿನ್ನ ಚಿಂತನೆ ಯಿಂದ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಮಾರುಕಟ್ಟೆ ಅಭಿವೃದ್ಧಿಯೊಂದಿಗೆ ಆರ್ಥಿಕವಾಗಿ ಸಬಲರಾಗಲು ಅವಕಾಶ ಕಂಡುಕೊಳ್ಳಬೇಕಿದೆ ಎಂದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವ ವಿದ್ಯಾಲಯದ ರಾಷ್ಟಿçÃಯ ಕೃಷಿ ಉನ್ನತ ಶಿಕ್ಷಣ ವಿಭಾಗದ ಸಂಚಾಲಕ ಡಾ. ಕೆ.ಸಿ ಶಶಿಧರ್ ಮಾತನಾಡಿ, ಕೃಷಿ ಎಂಬುವುದು ಕಂಪ್ಯೂಟರ್ ಜ್ಞಾನದೊಂದಿಗೆ ಮುಂದುವರಿಯುವ ಹಂತ ತಲುಪಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಯನ್ನು ಬಲಪಡಿಸಿಕೊಳ್ಳ ಬಹುದಾಗಿದೆ. ಕೃಷಿ ಮಾಹಿತಿ, ಮಾರುಕಟ್ಟೆ ಅಭಿವೃದ್ಧಿ ಕೂಡ ನಡೆಯುತ್ತಿದೆ. ಇದರಿಂದಾಗಿ ವಿಶ್ವವಿದ್ಯಾಲಯದ ರಾಷ್ಟಿçÃಯ ಕೃಷಿ ಉನ್ನತ ಶಿಕ್ಷಣದ ಮೂಲಕ ವಿದ್ಯಾರ್ಥಿ ಬಯಸುವ ಕೌಶಲ್ಯ ತರಬೇತಿ ಆಯೋಜಿಸಲು ಯೋಜನೆ ರೂಪಿಸಿಕೊಂಡಿದ್ದೇವೆ ಎಂದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವ ವಿದ್ಯಾಲಯದ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಂ. ಹನುಮಂತಪ್ಪ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಭಾರ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ ಇದ್ದರು.