ಸೋಮವಾರಪೇಟೆ, ಫೆ. ೪: ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾಗಾAಧಿಯವರ ಹೆಸರಿನಲ್ಲಿ ನಿರ್ಮಾಣವಾಗಿದ್ದ ಪ್ರಯಾಣಿಕರ ತಂಗುದಾಣವನ್ನು ಕೆಡವಿ, ಹೊಸ ತಂಗುದಾಣ ನಿರ್ಮಿಸಿದ್ದು, ಇದಕ್ಕೆ ‘ಮೂಲ ನಿರ್ಮಾಣ-ಇಂದಿರಾಗಾAಧಿ ಅಭಿಮಾನಿಗಳ ಸಂಘ’ ಎಂದು ಫಲಕ ಹಾಕದಿದ್ದರೆ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ನಗರ ಕಾಂಗ್ರೆಸ್ ಸಮಿತಿ ಎಚ್ಚರಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ನಾಗರಾಜು ಮಾತನಾಡಿ, ಶಾಸಕ ಅಪ್ಪಚ್ಚು ರಂಜನ್ ಅಭಿಮಾನಿಗಳ ಸಂಘದ ಹೆಸರಿನಲ್ಲಿ ತಂಗುದಾಣ ನಿರ್ಮಾಣವಾಗಿದೆ. ಇವರ ಅಭಿಮಾನಿಗಳು ಖಾಸಗಿ ಜಾಗವನ್ನು ಖರೀದಿಸಿ ಶಾಸಕರ ಹೆಸರಿನಲ್ಲಿ ತಂಗುದಾಣ ನಿರ್ಮಾಣ ಮಾಡಿದ್ದರೆ ಯಾವುದೇ ತಕರಾರು ಇರಲಿಲ್ಲ.

ಸ್ವಂತ ಹಣದಿಂದ ತಂಗುದಾಣ ನಿರ್ಮಿಸಿರುವುದಾಗಿ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ತಂಗುದಾಣ ಹಾಗೂ ನೀರಿನ ಘಟಕ ಉದ್ಘಾಟನೆ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರು, ತಮ್ಮ ಸಂಸದರ ನಿಧಿಯಿಂದ ೧೧ ಲಕ್ಷ ಅನುದಾನ ನೀಡಲಾಗಿದೆ ಎಂದಿದ್ದಾರೆ. ಈ ಬಗ್ಗೆ ಪೂರ್ಣ ವಿವರಕ್ಕೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದರು.

ಇದರೊAದಿಗೆ ರಾಜ್ಯ ಹೆದ್ದಾರಿಯ ನಿಯಮ ಮೀರಿ ಕಟ್ಟಡ ನಿರ್ಮಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಪಟ್ಟಣ ಪಂಚಾಯಿತಿ ಜಾಗದಲ್ಲಿ ತಂಗುದಾಣ ನಿರ್ಮಿಸಿದ್ದರೂ ಪಂಚಾಯಿತಿ ಸದಸ್ಯರ ಹೆಸರುಗಳನ್ನು ಹಾಕದೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು.

ಪಂಚಾಯಿತಿಯ ಕೆಲ ಸದಸ್ಯರು ಬೇನಾಮಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಹಳೆ ಬಾವಿಗಳನ್ನು ದುರಸ್ತಿ ಮಾಡದೆ ಬಿಲ್ ಪಡೆದು ಇದೀಗ ಸಿಕ್ಕಿಹಾಕಿಕೊಂಡಿದ್ದಾರೆ. ಶೌಚಾಲಯಕ್ಕೆ ಬಣ್ಣ ಬಳಿಯುವುದು, ವಾಣಿಜ್ಯ ಮಳಿಗೆ ದುರಸ್ತಿ ಹೀಗೆ ಎಲ್ಲದರಲ್ಲೂ ಅವ್ಯವಹಾರ ನಡೆಯುತ್ತಿದೆ. ಇವುಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್.ಸಿ. ಘಟಕದ ಬ್ಲಾಕ್ ಅಧ್ಯಕ್ಷ ಹೆಚ್.ಬಿ. ರಾಜಪ್ಪ, ಕಾರ್ಯದರ್ಶಿ ಹೆಚ್.ಬಿ. ಮಂಜುನಾಥ್, ಸೇವಾದಳ ತಾಲೂಕು ಅಧ್ಯಕ್ಷ ಹೆಚ್.ಬಿ. ಬಸವರಾಜು, ನಗರ ಕಾರ್ಯದರ್ಶಿ ಮಹಮ್ಮದ್ ಶಫಿ ಉಪಸ್ಥಿತರಿದ್ದರು.