ಹೆಬ್ಬಾಲೆ, ಫೆ. ೩: ರಾಯಚೂರಿನಲ್ಲಿ ಗಣರಾಜ್ಯೋತ್ಸವ ಆಚರಣೆ ಸಂದರ್ಭ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆನ್ನಲಾದ ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜೈಭೀಮ್ ಯುವಕ ಸಂಘದ ವತಿಯಿಂದ ಹೆಬ್ಬಾಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಜೈಭೀಮ್ ಯುವಕ ಸಂಘದ ಅಧ್ಯಕ್ಷ ತ್ರಿನೇಶ್ ನೇತೃತ್ವದಲ್ಲಿ ಕನಕಬ್ಲಾಕ್ ವತಿಯಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪಂಚಾಯಿತಿ ಪಿಡಿಓ ಅಸ್ಮಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಅರುಣ್, ಕುಮಾರ್, ಶರತ್, ವಿಶ್ವನಾಥ್, ಬಾಲು, ಸಿದ್ದಾರ್ಥ್, ಕಿರಣ್ ಕುಮಾರ್, ನರೇಂದ್ರ ಸುಂದರ್ ದಾಸ್, ವಿಜೇಂದರ್ ಭಾಗವಹಿಸಿದ್ದರು.