ಮಡಿಕೇರಿ, ಫೆ. ೩: ನಗರದ ಚಾಮುಂಡೇಶ್ವರಿ ನಗರದಲ್ಲಿ ‘ಕಸ ಎಸೆಯಬೇಡಿ' ಎಂಬ ನಗರಸಭೆಯ ಫಲಕದಡಿಯಲ್ಲಿಯೇ ದಿನನಿತ್ಯ ಯಾರೋ ದುರುಳರು ಕಸ ಎಸೆಯುತ್ತಿದ್ದು, ಬೀದಿ ನಾಯಿಗಳು ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ. ಈ ಹಿಂದೆ ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿರುವ ಸ್ಥಳೀಯರು, ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಈ ವ್ಯಾಪ್ತಿಯಲ್ಲಿ ಸಿ.ಸಿ ಕ್ಯಾಮರ ಅಳವಡಿಸುವಂತೆ ಒತ್ತಾಯಿಸಿದ್ದಾರೆ.