ವೀರಾಜಪೇಟೆ: ಇಲ್ಲಿನ ನಿವೃತ್ತ ಉದ್ಯೋಗಸ್ಥರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಚೊಟ್ಟೆಯಂಡಮಾಡ ಯನ್. ವಿಶ್ವನಾಥ್ ಹಾಗೂ ನಿರ್ದೇಶಕರೊಂದಿಗೆ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷರು ದಿನ ಮಹತ್ವವನ್ನು ತಿಳಿಸಿದರು. ಲಾಲ ಲಜಪೂತ್ ರಾಯ್, ಮಹಾತ್ಮಾ ಗಾಂಧೀಜಿ ಮುಂತಾದ ಮಹನಿಯರನ್ನು ಸ್ಮರಿಸಿದರು. ಇಂದಿನ ಯುಗದಲ್ಲಿ ಆರೋಗ್ಯಕ್ಕಾಗಿ ಸರಕಾರದ ನಿಯಮವನ್ನು ಪಾಲಿಸಿಕೊಂಡು ಆರೋಗ್ಯವಾಗಿರಿ ಎಂದು ಎಲ್ಲರಿಗೂ ಸಂದೇಶ ನೀಡಿದರು.ಮದೆ ಗೋಳಿಕಟ್ಟೆ: ಇಲ್ಲಿಗೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಿಕಟ್ಟೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಸದಸ್ಯ ನಡುಗಲ್ಲು ರಾಮಯ್ಯ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಯು. ಸುಂದರ ನೆರವೇರಿಸಿದರು. ದಿನದ ಮಹತ್ವದ ಬಗ್ಗೆ ಶಾಲಾ ಶಿಕ್ಷಕಿ ಕೋಮಲ ಮಾತನಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪೂರ್ಣೇಶ್, ಸೀತಮ್ಮ, ಯಶೋಧ ಹಾಗೂ ಇತರರು ಹಾಜರಿದ್ದರು.ಬೆಟ್ಟತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಟತ್ತೂರುವಿನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಕೆ. ಹೇಮರಾಜು ಅವರು ವಹಿಸಿದ್ದರು.
ವೇದಿಕೆಯಲ್ಲಿ ಮದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ನಂಜಪ್ಪ, ಶಾಲಾ ಮುಖ್ಯ ಶಿಕ್ಷಕ ಚಂದ್ರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ ಚೆರಿಯಮನೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ನೆನಪಿನ ಕಾಣಿಕೆಯನ್ನು ನೀಡಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪಂಚಾಯಿತಿ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಭಾಷಣ, ದೇಶಭಕ್ತಿ ಗೀತೆಗಳನ್ನು ಹಾಡಿದರು.