ಮಡಿಕೇರಿ, ಫೆ. ೪: ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಎಕ್ಸೊಆನ್ ಮೊಬೈಲ್ ಕಂಪನಿ ಸಂಯುಕ್ತ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಗೆ ಅಗತ್ಯವಾದ ಕೋವಿಡ್-೧೯ ಆರೋಗ್ಯ ಪರಿಕರಗಳನ್ನು ನೀಡಲಾಯಿತು.
ಸಂಸ್ಥೆಯ ಮುಖ್ಯಸ್ಥ ಕೆ. ಸತೀಶ್ ಅವರ ನೇತೃತ್ವದಲ್ಲಿ ರೂ. ೬ ಲಕ್ಷ ಮೌಲ್ಯದ ಐಸಿಯು ಬೆಡ್‌ಗಳು, ಐಸಿಯು ಮಾನಿಟರ್‌ಗಳು ಹಾಗೂ ಆರೋಗ್ಯ ಪರಿಕರಗಳನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಮೂಲಕÀ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮುಖ್ಯ ವೈದ್ಯಾಧಿಕಾರಿ ಡಾ. ಮಂಜುನಾಥ್, ವೈದ್ಯಕೀಯ ಕಾಲೇಜಿನ ನಿರ್ದೇಶಕರು ಮತ್ತು ಡೀನ್ ಡಾ. ಕೆ.ಬಿ. ಕರಿಯಪ್ಪ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಪ್ರಮುಖರಾದ ದರ್ಶನ್ ಹಾಜರಿದ್ದರು.