ಕೂಡಿಗೆ, ಫೆ. ೪: ಹಾರಂಗಿ ಜಲಾಶಯದ ಮುಖ್ಯ ವಿಭಾಗದ ಕಚೇರಿಯನ್ನು ಕುಶಾಲನಗರದಿಂದ ಹಾರಂಗಿ ಜಲಾಶಯದ ಸಮೀಪಕ್ಕೆ ಸ್ಥಳಾಂತರಿಸುವ ಬಗ್ಗೆ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಕೂಡಿಗೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಚರ್ಚಿಸಿ ಸಭೆಯ ನಡಾವಳಿಕೆ ಪುಸ್ತಕದಲ್ಲಿ ನೋಂದಣಿ ಮಾಡಲಾಗಿತು. ಅದರನ್ವಯ ಗ್ರಾಮ ಪಂಚಾಯಿತಿ ವತಿಯಿಂದ ಮುಖ್ಯ ಮಂತ್ರಿಯವರಿಗೆ, ಜಲಸಂಪನ್ಮೂಲ ಸಚಿವರಿಗೆ, ರಾಜ್ಯಮಟ್ಟದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಕಳುಹಿಸಿದೆ.

ಕುಶಾಲನಗರ ತಾಲೂಕು ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಜಲಾಶಯವಿದ್ದು, ಹಾರಂಗಿಯಲ್ಲಿ ಈ ಹಿಂದೆ ಹಾರಂಗಿ ಜಲಾನಯನದ ಆವರಣದಲ್ಲಿ ಎರಡು ಮುಖ್ಯ ವಿಭಾಗ, ಮತ್ತು ಒಂದು ಉಪ ವಿಭಾಗ ಕಾರ್ಯನಿರ್ವಹಿಸುತ್ತಿತ್ತು. ಆದರೆ ಹಲವು ವರ್ಷಗಳ ಹಿಂದೆ ಒಂದು ಮುಖ್ಯ ವಿಭಾಗ ವನ್ನು ಲೋಕೋಪ ಯೋಗಿ ಇಲಾಖೆಗೆ ವರ್ಗಾಯಿಸಿ ಬೆಳಗಾವಿಗೆ ಸ್ಥಳಾಂತರಿಸಲಾಯಿತು. ಮತ್ತೊಂದು ಮುಖ್ಯ ವಿಭಾಗವನ್ನು ಜಲಾಶಯದಿಂದ ೧೦ ಕಿ.ಮೀ. ದೂರದ ಕುಶಾಲನಗರಕ್ಕೆ ಸ್ಥಳಾಂತರಿಸ ಲಾಯಿತು. ಆದರೆ ರಾಜ್ಯದ ವಿವಿಧೆಡೆ ಇರುವ ಎಲ್ಲಾ ಜಲಾಶಯಗಳಲ್ಲಿ ಇಲಾಖೆಯ ಮುಖ್ಯ ಕಚೇರಿಗಳು ಅಣೆಕಟ್ಟೆಯ ಮುಖ್ಯ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.

ಆದರೆ ಹಾರಂಗಿಯಲ್ಲಿ ಇರಬೇಕಾದ ಮುಖ್ಯ ವಿಭಾಗ ಮತ್ತು ಉಪ ವಿಭಾಗ ಕಚೇರಿಗಳು ಕಳೆದ ೩೦ ವರ್ಷಗಳ ಹಿಂದೆ ಹಾರಂಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಕಾರಣಾಂತರಗಳಿAದ ಹಾರಂಗಿ ಯಿಂದ ಕುಶಾಲನಗರಕ್ಕೆ ಎರಡೂ ಕಚೇರಿಗಳು ವರ್ಗಾವಣೆಗೊಂಡಿದವು. ಜಿಲ್ಲೆಯ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಸಮಸ್ಯೆಗಳನ್ನು ತಿಳಿಸಲು ಹಾರಂಗಿ ಯಿಂದ ೧೦ ಕಿ.ಮೀ. ದೂರದಲ್ಲಿರುವ ಕುಶಾಲನಗರದವರೆಗೆ ಹೋಗಬೇಕಾಗುತ್ತದೆ.

ಹಾರಂಗಿಯಲ್ಲಿ ಮೊದಲು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಕಚೇರಿಯ ಕಟ್ಟಡಗಳು ಪಾಳುಬಿದ್ದವೆ. ಇದರ ಜೊತೆಯಲ್ಲಿ ಹಾರಂಗಿಯಲ್ಲಿ ಜಲಾಶಯಕ್ಕೆ ಸಂಬAಧಿಸಿದ ವಸತಿ ಗೃಹಗಳು ಸಹ ಇವೆ. ಇವುಗಳನ್ನು ಬೇರೆ ಇಲಾಖೆಯವರು ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ಕುಶಾಲ ನಗರದಲ್ಲಿರುವ ಎಲ್ಲಾ ಕಚೇರಿಗಳನ್ನು ಹಾರಂಗಿಗೆ ಸ್ಥಳಾಂತರ ಮಾಡುವಂತೆ ಸಂಬAಧಿಸಿದ ಅಧಿಕಾರಿ ವರ್ಗದವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮನವಿ ಸಲ್ಲಿಸಲಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ