ಸುಂಟಿಕೊಪ್ಪ, ಫೆ. ೪: ಸುಂಟಿಕೊಪ್ಪ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಕಿರು ಸೇತುವೆ ನಿರ್ಮಾಣ ಸೇರಿದಂತೆ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಕುಡಿಯುವ ನೀರು, ರಸ್ತೆ, ಕಿರುಸೇತುವೆ ಒಳಚರಂಡಿಗೆ ೫ ಕೋಟಿ ೪೦ ಲಕ್ಷ ರೂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಕಾಮಗಾರಿಯ ಗುಣಮಟ್ಟವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮಸ್ಥರು ಪರಿಶೀಲಿಸಬೇಕು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾರೂ ವಿರೋಧ ವ್ಯಕ್ತಪಡಿಸಬಾರದು ಎಂದರು.

ಸುಂಟಿಕೊಪ್ಪ ಪಾರ್ವತಿ ಬಡಾವಣೆ ರಸ್ತೆ, ಗದ್ದೆಹಳ್ಳ ಸರಕಾರಿ ಶಾಲೆ ಬಳಿ ರಸ್ತೆ, ಆರೋಗ್ಯ ಕೇಂದ್ರದ ರಸ್ತೆ, ಸರಕಾರಿ ಆರೋಗ್ಯ ಕೇಂದ್ರದ ರಸ್ತೆ, ಕೆಂಚಟ್ಟಿ ಐನ್‌ಮನೆ ತೆರಳುವ ರಸ್ತೆ, ಕಿರು ಸೇತುವೆಗೆ ಭೂಮಿಪೂಜೆ ಹಾಗೂ ಗುಡ್ಡಪ್ಪ ರೈ ಬಡಾವಣೆ ರಸ್ತೆ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು.

ಕೆದಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗೆ ರೂ. ೯೨.೪೦ ಲಕ್ಷ, ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ರೂ. ೫೩.೯೦ ಲಕ್ಷ, ಕೊಡಗರಹಳ್ಳಿ ಗ್ರಾ.ಪಂ.ಗೆ ರೂ. ೧ ಕೋಟಿ ೨೦ ಲಕ್ಷ, ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ರೂ. ೩ ಕೋಟಿ ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಗೆ ರೂ. ೫ ಲಕ್ಷ ನಿಗದಿಪಡಿಸಲಾಗಿದೆ ಎಂದು ಶಾಸಕರು ಹೇಳಿದರು. ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ.ಆರ್. ಸುನಿಲ್ ಕುಮಾರ್, ಜಿನಾಸುದ್ದೀನ್, ಪಿ.ಎಫ್. ಸಬಾಸ್ಟಿನ್, ಬಿ.ಎಂ. ಸುರೇಶ್, ರಫೀಕ್ ಖಾನ್, ಶಬ್ಬಿರ್, ಮಂಜುನಾಥ್, ಶಾಂತಿ, ವಸಂತಿ, ಮಂಜುಳ, ಪಿಡಿಓ ವೇಣುಗೋಪಾಲ್, ಅಭಿಯಂತರರಾದ ಫಯಾಜ್ ಆಹ್ಮದ್, ಪಿಡ್ಲೂö್ಯಡಿ ಇಂಜಿನಿಯರ್ ಶ್ರೀನಿವಾಸ, ಶಕ್ತಿ ಕೇಂದ್ರದ ಪ್ರಮುಖ್‌ಗಳಾದ ಬಿ.ಕೆ. ಪ್ರಶಾಂತ್, ವಾಸುದೇವ್ ಜಿಲ್ಲಾ ಹಿಂದುಳಿದ ವರ್ಗಗಳ ಬಿ.ಕೆ. ಮೋಹನ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.