ದೂರು ದಾಖಲು

ಮಡಿಕೇರಿ, ಫೆ. ೪: ಕ್ಷÄಲ್ಲಕ ಕಾರಣಕ್ಕೆ ಬೀದಿಬದಿ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಬ್ಯಾಡ್ಮಿಂಟನ್ ಆಟಗಾರ, ವಿಶೇಷಚೇತನ ಜಂಶೀರ್ ಎಂಬವರು ಕಳೆದ ಕೆಲವು ತಿಂಗಳುಗಳಿAದ ರಾಜಾಸೀಟ್ ಉದ್ಯಾನವನದ ಬಳಿ ಪಾಪ್‌ಕಾರ್ನ್ ಅಂಗಡಿಯಲ್ಲಿ ಚಿಪ್ಸ್ ವ್ಯಾಪಾರ ಮಾಡುತ್ತಿದ್ದರು. ವಾರ್ಡ್ನ ನಗರಸಭಾ ಸದಸ್ಯೆ ಶ್ವೇತ ಅವರು ಜಂಶೀರ್ ಬಳಿ ಪರವಾನಗಿ ಕೇಳಿದ್ದಾರೆ. ಪರವಾನಗಿಯಲ್ಲಿ ಪಾಪ್‌ಕಾರ್ನ್ ಅಂಗಡಿ ಎಂದು ಇದೆ. ಆದರೆ ಚಿಪ್ಸ್ ಮಾರಾಟ ಮಾಡುತ್ತಿದ್ದೀರ ಎಂದು ಸದಸ್ಯೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಬಂದ ಸದಸ್ಯೆಯ ಪತಿ ಪ್ರಶಾಂತ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜಂಶೀರ್ ದೂರು ನೀಡಿದ್ದಾರೆ.

ಹಲ್ಲೆ ನಡೆಸಿದ ದೃಶ್ಯವನ್ನು ಸೆರೆ ಹಿಡಿದ ತನ್ನ ಕೆಲಸಗಾರನ ಮೇಲೆ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಜಂಶೀರ್ ತಿಳಿಸಿದ್ದಾರೆ. ಸ್ಥಳದಲ್ಲಿ ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದ್ದು, ನಗರಸಭಾ ಸದಸ್ಯೆಯ ವರ್ತನೆಗೆ ಖಂಡನೆ ವ್ಯಕ್ತವಾಗುತ್ತಿದೆ. ಘಟನೆಯನ್ನು ಖಂಡಿಸಿರುವ ಕೊಡಗು ಜಿಲ್ಲಾ ವಿಶೇಷಚೇತನರ ಸಂಘ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಅಂಗಡಿ ತೆರವಿಗೆ ಯತ್ನ: ಘಟನೆ ನಡೆದ ನಂತರ ಸ್ಥಳಕ್ಕೆ ಬಂದ ನಗರಸಭೆ ಅಧಿಕಾರಿಗಳು ಜಂಶೀರ್ ಅಂಗಡಿಯನ್ನು ಮುಚ್ಚಿಸಲು ಮುಂದಾದರು. ಈ ಸಂದರ್ಭ ಕೊಡಗು ರಕ್ಷಣಾ ವೇದಿಕೆಯ ಪ್ರಮುಖರು ತಡೆಯೊಡ್ಡಿ ಯಾವುದೇ ಕಾರಣಕ್ಕೂ ವಿಶೇಷಚೇತನ ವ್ಯಾಪಾರಿಗೆ ಅನ್ಯಾಯವಾಗಲು ಬಿಡುವುದಿಲ್ಲವೆಂದರು.