ಜಿಲ್ಲೆಯ ಯುವಕ ದುರ್ಮರಣ

ವೀರಾಜಪೇಟೆ, ಫೆ. ೩ : ಕರ್ತವ್ಯದಲ್ಲಿದ್ದ ಖಾಸಗಿ ಕಂಪೆನಿಯ ಕೊಡಗು ಜಿಲ್ಲೆ ಮೂಲದ ಉದ್ಯೋಗಿಯೊಬ್ಬರು ರೈಲು ಹತ್ತುವ ವೇಳೆ ಕಾಲು ಜಾರಿ ಬಿದ್ದು ದುರ್ಮರಣ ಹೊಂದಿರುವ ಘಟನೆ ಬೆಂಗಳೂರು - ಮೈಸೂರು ಮಾರ್ಗದಲ್ಲಿ ನಡೆದಿದೆ. ವೀರಾಜಪೇಟೆ ಕಲ್ಲುಬಾಣೆ ನಿವಾಸಿ ಹಮೀದ್ ಅವರ ಪುತ್ರ ಮೈಸೂರು ಖಾಸಗಿ ಕಂಪೆನಿಯ ನೌಕರ ಮೊಹಮ್ಮದ್ ರಾಫಿ ಕೆ.ಹೆಚ್. (೨೮) ಮೃತ ಯುವಕ.

ಮೃತರಾದ ಮೊಹಮ್ಮದ್ ರಾಫಿ ಅವರು ಇಂಜಿನಿಯರಿAಗ್ ಪದವಿ ಮುಗಿಸಿ ಮೈಸೂರು ಖಾಸಗಿ ಕಂಪೆನಿಯೊAದರಲ್ಲಿ ಉದ್ಯೋಗಿಯಾಗಿದ್ದರು. ಸತತ ನಾಲ್ಕು ವರ್ಷಗಳಿಂದ ಪ್ರಸ್ತುತ ಕಂಪೆನಿಯಲ್ಲಿ ನೌಕರನಾಗಿ ಸೇವೆಯಲ್ಲಿದ್ದರು. ತಾ. ೨ ರಂದು ಬೆಂಗಳೂರಿನಲ್ಲಿ ಕರ್ತವ್ಯ ನಿಮಿತ್ತ ಕಂಪೆನಿಯ ಸಭೆಯೊಂದರಲ್ಲಿ ಭಾಗವಹಿಸಿ ಮೈಸೂರಿಗೆ ಹಿಂದಿರುಗುತ್ತಿದ್ದರು.

ರೈಲಿನಲ್ಲಿ ಪ್ರಯಾಣ ಬೆಳೆಸಿದ ಮೊಹಮ್ಮದ್ ರಾಫಿ ಮಂಡ್ಯ ರೈಲು ನಿಲ್ದಾಣದಲ್ಲಿ ನೀರಿನ ಬಾಟೆಲ್ ತೆಗೆದುಕೊಂಡು ರೈಲು ಚಾಲನೆಗೊಂಡಿದೆ, ಇದನ್ನು ಹತ್ತಲು ಹೋದ ವೇಳೆಯಲ್ಲಿ ಕಾಲು ಜಾರಿ ರೈಲು ಮತ್ತು ಫ್ಲಾಟ್ ಫಾರಂ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದು, ಗಂಭೀರ ಗಾಯಗಳಾಗಿ ಸಾವನ್ನಪ್ಪಿದ್ದಾರೆ. ಮೃತರ ಸ್ನೇಹಿತರೊಬ್ಬರು ನೀಡಿದ ದೂರಿನ ಮೇರೆಗೆ ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. -ಕಿಶೋರ್ ಕುಮಾರ್ ಶೆಟ್ಟಿ