ಚೆಟ್ಟಳ್ಳಿ, ಫೆ. ೪: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರ ಅನುದಾನದಲ್ಲಿ ಕಾಫಿ ಬೋರ್ಡ್ ಪೇರಿಯನ ಐನ್ಮನೆ ಹಾಗೂ ಸಿದ್ದಿಕಲ್ ಕುಟುಂಬಸ್ಥರ ಮನೆ ಕಡೆ ಹೋಗುವ ರೂ. ೨ ಲಕ್ಷ ಹತ್ತು ಸಾವಿರ ವೆಚ್ಚದಲ್ಲಿ ನಿರ್ಮಾಣಗೊಂಡ ೧೨೦ ಮೀಟರ್ ಡಾಂಬರು ರಸ್ತೆಯನ್ನು ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜಲಜೀವನ್ ಯೋಜನೆಯಡಿಯಲ್ಲಿ ಕಾಫಿ ಬೋರ್ಡ್ ವಾರ್ಡ್ಗೆ ನೀರಿನ ಟ್ಯಾಂಕ್ ನಿರ್ಮಿಸಲು ಕೆಲವರು ವಿರೋಧ ಮಾಡಿದ್ದರು. ಆದರೆ ಶಾಸಕ ಅಪ್ಪಚ್ಚು ರಂಜನ್ ಅವರ ಬೆಂಬಲದೊAದಿಗೆ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
ಮುAದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ರೂ. ೨೫ ಲಕ್ಷ ವಿಶೇಷ ಅನುದಾನ ಬಿಡುಗಡೆಯಾಗಲಿದೆ. ಇದನ್ನು ಸರಿಯಾದ ಕ್ರಿಯಾ ಯೋಜನೆಯನ್ನು ತಯಾರುಪಡಿಸಿ, ಗ್ರಾಮ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಸದಸ್ಯರು ಅತೀ ಹೆಚ್ಚು ಒತ್ತು ಕೊಡಬೇಕಾಗಿ ಕರೆ ನೀಡಿದರು. ಈ ಸಂದರ್ಭ ಚೆಟ್ಟಳ್ಳಿ ಪಂಚಾಯಿತಿ ಸದಸ್ಯರಾದ ನಂದಿನಿ ಉದಯ, ಮಾಜಿ ಸದಸ್ಯರಾದ ರವಿ, ಮೇರಿ ಅಂಬುದಾಸ್, ಗುತ್ತಿಗೆದಾರ ರಾದ ಸಲೀಂ, ಅಂಬುದಾಸ್, ನಂಜೇಗೌಡ, ಬಿಜೆಪಿ ಪ್ರಮುಖರಾದ ಪೇರಿಯನ ಉದಯ, ಜಗತ್ ನೂಜಿಬೈಲ್, ಹರಿ ಮರದಾಳು, ಅರುಣ್, ಮುರಳಿ, ಪೂಣಚ್ಚ, ಪೇರಿಯನ ಹಾಗೂ ಸಿದ್ದಿಕಲ್ ಕುಟುಂಬಸ್ಥರು ಹಾಜರಿದ್ದರು.