* ವೀರಾಜಪೇಟೆ, ಫೆ. ೪: ತಂದೆ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣವನ್ನು ಅವರು ಮೃತಪಟ್ಟ ಬಳಿಕ ಅವರ ಪುತ್ರಿ, ತಾಯಿ ಹಾಗೂ ಸಹೋದರನ ಗಮನಕ್ಕೆ ಬಾರದೇ ತಾನೇ ಬಿಡಿಸಿಕೊಂಡಿರುವ ಪ್ರಸಂಗವೊAದು ವರದಿಯಾಗಿದೆ. ಇದಕ್ಕೆ, ಸಂಬAಧಿಸಿದAತೆ ಬ್ಯಾಂಕ್‌ನ ವ್ಯವಸ್ಥಾಪಕರ ಸಹಕಾರವಿರುವ ಆರೋಪದೊಂದಿಗೆ ಇವರಿಬ್ಬರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ನ್ಯಾಯಾಲಯ ಸೂಚನೆ ನೀಡಿದೆ. ಈ ವಿಚಾರದ ಬಗ್ಗೆ ಮೃತರ ಪತ್ನಿ ಹಾಗೂ ಮಗ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ತನಿಖೆಗೆ ಆದೇಶಿಸಿದೆ.

ವಿಚಾರವೇನು? : ಕೆದಮುಳ್ಳೂರು ಗ್ರಾಮದ ಕೆ.ಎಂ. ಚಂದ್ರೇಗೌಡ ಅವರು ವೀರಾಜಪೇಟೆಯ ರಾಷ್ಟಿçÃಕೃತ ಬ್ಯಾಂಕೊAದರ ಶಾಖೆಯಲ್ಲಿ ೨೦೧೯ರ ಮಾರ್ಚ್ನಲ್ಲಿ ರೂ. ೧೦ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಅಡಮಾನವಾಗಿ ಇಟ್ಟಿದ್ದು, ಇದರ ಮೇಲೆ ಸಾಲ ಪಡೆದಿದ್ದರು. ಆದರೆ ಇವರು ೨೦.೬.೨೦೨೦ರಲ್ಲಿ ನಿಧನರಾಗಿದ್ದಾರೆ. ಮೃತ ಚಂದ್ರೇಗೌಡ ಅವರಿಗೆ ಪತ್ನಿ ಕೆ.ಸಿ. ಶಾಂತ, ಪುತ್ರ ಕೆ.ಸಿ. ಪರಮೇಶ್ ಹಾಗೂ ಪುತ್ರಿ ವಿ.ಜಿ. ರೇಖಾ ಎಂಬವರು ಅವಲಂಬಿತರು. ಇವರು ನಿಧನರಾದ ಬಳಿಕ ಶಾಂತ ಹಾಗೂ ಪುತ್ರ ಪರಮೇಶ್ ಚಿನ್ನ ಬಿಡಿಸಲೆಂದು ಬ್ಯಾಂಕ್‌ಗೆ ತೆರಳಿದಾಗ ಪುತ್ರಿ ರೇಖಾಳನ್ನು ಕರೆತರುವಂತೆ ಹಾಗೂ ಮರಣದೃಢೀಕರಣ ಪತ್ರ ಕುಟುಂಬ ವಂಶಾವಳಿ ಪಟ್ಟಿ, ಜೀವಂತ ಸದಸ್ಯರ ಪಟ್ಟಿ, ಕುಟುಂಬದ ಇತರರ ನಿರಾಪೇಕ್ಷಣಾ ಪತ್ರ ತರುವಂತೆ ಸೂಚಿಸಲಾಗಿದೆ.

ಈ ವಿಚಾರವನ್ನು ಅರಿತ ರೇಖಾ ಬಳಿಕ ಬ್ಯಾಂಕ್‌ಗೆ ತೆರಳಿ ಶಾಂತ ಹಾಗೂ ಪರಮೇಶ್ ಅವರ ಗಮನಕ್ಕೆ ಬಾರದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಹಿಯನ್ನು ನಕಲಿಯಾಗಿ ಮಾಡಿ ಎಲ್ಲಾ ಚಿನ್ನವನ್ನು ತಮ್ಮ ಸ್ವಾಧೀನಕ್ಕೆ ಪಡೆದಿದ್ದಾರೆ. ಕೆಲವು ದಿನಗಳ ಬಳಿಕ ತಾಯಿ, ಮಗ ಮತ್ತೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಈಗಾಗಲೇ ರೇಖಾ ಚಿನ್ನ ಬಿಡಿಸಿಕೊಂಡು ಹೋಗಿದ್ದಾರೆ. ದಾಖಲೆಗಳಿಗೆ ನೀವುಗಳೂ ಸಹಿ ಮಾಡಿರುವುದಾಗಿ ದಾಖಲೆಗಳನ್ನು ತೋರಿಸಲಾಗಿದೆ ಎಂಬದು ವ್ಯಕ್ತಗೊಂಡಿರುವ ಆರೋಪವಾಗಿದೆ.

ಚಿನ್ನ ಬಿಡಿಸುವಾಗ ಬ್ಯಾಂಕ್‌ನ ನಿಯಮದ ಪ್ರಕಾರ ವ್ಯವಸ್ಥಾಪಕ ಮುಂದೆ ಇದನ್ನು ಸ್ವಾಧೀನಕ್ಕೆ ಪಡೆಯುತ್ತಿರುವ ಬಗ್ಗೆ ನಾವುಗಳೂ ಸಹಿ ಮಾಡಬೇಕು. ಆದರೆ ಇಲ್ಲಿ ವ್ಯವಸ್ಥಾಪಕರ ಮುಂದೆಯೇ ತಮ್ಮ ಹಾಗೂ ಪುತ್ರನ ಸಹಿಯನ್ನು ನಕಲಿಯಾಗಿ ಮಾಡಲಾಗಿದೆ ಎಂಬದಾಗಿ ಇದೀಗ ಶಾಂತ ಅವರು ಆರೋಪಿಸಿದ್ದಾರೆ. ಮಾತ್ರವಲ್ಲದೆ ಈ ಬಗ್ಗೆ ತಮ್ಮ ವಕೀಲರಾದ ವಿ.ಪಿ. ರಮೇಶ್ ಅವರ ಮೂಲಕ ವೀರಾಜಪೇಟೆಯ ನ್ಯಾಯಾಲಯ ದಲ್ಲಿ ತಾವುಗಳು ಬ್ಯಾಂಕಿನಿAದ ಮಾಹಿತಿ ಹಕ್ಕಿನಂತೆ ಪಡೆದ ದಾಖಲೆ ಸಹಿತವಾಗಿ ಖಾಸಗಿ ಪ್ರಕರಣ ಹೂಡಿದ್ದಾರೆ.

ಈ ಪ್ರಕರಣವನ್ನು ಪುರಸ್ಕರಿಸಿರುವ ಅಪರ ಸಿವಿಲ್ ನ್ಯಾಯಾಧೀಶರು (ಕಿರಿಯಶ್ರೇಣಿ ನ್ಯಾಯಾಲಯ) ಇದೀಗ ಈ ವಿಚಾರದ ಬಗ್ಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪೊಲೀಸ್ ದೂರು ದಾಖಲಿಸಲು ಸೂಚಿಸಿದ್ದಾರೆ. ಇದರಂತೆ ಸೆಕ್ಷನ್ ೪೨೦, ೪೬೩, ೪೬೫, ೪೬೮ ಖ/ತಿ ೩೪ ರಂತೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಿನ್ನೆ ವೀರಾಜಪೇಟೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕೆ.ಸಿ. ಶಾಂತ ಹಾಗೂ ಕೆ.ಸಿ. ಪರಮೇಶ್ ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ವ್ಯವಸ್ಥಾಪಕಿ ಅಂಜು ಹಾಗೂ ಚಿನ್ನಬಿಡಿಸಿಕೊಂಡಿರುವ ವಿ.ಜಿ. ರೇಖಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಸುದ್ದಿಗೋಷ್ಠಿಯಲ್ಲಿ ವಕೀಲ ವಿ.ಪಿ. ರಮೇಶ್ ಕೂಡ ಉಪಸ್ಥಿತರಿದ್ದು, ಈ ಕುರಿತು ವಿವರವಿತ್ತರು.