ಸುಂಟಿಕೊಪ್ಪ, ಫೆ. ೩: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರ ಅಲಭ್ಯತೆಯಿಂದ ಪ್ರಥಮ ಚಿಕಿತ್ಸೆ ಲಭಿಸದೆ ರೋಗಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ ಅವರು ವಿಷಯದ ಗಂಭೀರತೆಯನ್ನು ಅರಿತುಕೊಂಡು ಆಸ್ಪತ್ರೆಗೆ ಭೇಟಿ ನೀಡಿದರು.

ಸುಂಟಿಕೊಪ್ಪ ಹೋಬಳಿ ಕೇಂದ್ರದ ಸರಕಾರಿ ಆಸ್ಪತ್ರೆಯಾಗಿದೆ. ಪ್ರತಿದಿನ ನೂರಾರು ಹೊರರೋಗಿಗಳು, ಹೆರಿಗೆಗೆ ಸಂಬAಧಿಸಿದAತೆ ಗರ್ಭಿಣಿಯರು ಬರುತ್ತಾರೆ. ಪಟ್ಟಣದ ನಡುವೆ ರಾಷ್ಟಿçÃಯ ಹೆದ್ದಾರಿ ಆಗಿದ್ದು, ಅವಘಡ ಸಂಭವಿಸುತ್ತಿರುತ್ತದೆ. ಆದರೆ ರಾತ್ರಿ ಪಾಳಿಯದ ವೈದ್ಯರು ಕಾರ್ಯನಿರ್ವಹಿಸುತ್ತಿಲ್ಲ ಈಗಾಗಲೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಸಿಗದೆ ೨ ಮಂದಿ ಸಾವನ್ನಪ್ಪಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಗ್ರಾ.ಪಂ.ಸದಸ್ಯರುಗಳಾದ ಶಬ್ಬೀರ್, ಆಲಿಕುಟ್ಟಿ ನಾಗರತ್ನ ದೂರಿದರು.

ಡಿಎಚ್‌ಓ ಡಾ. ವೆಂಕಟೇಶ್ ಅವರು ಜನಪ್ರತಿನಿಧಿಗಳ ಗ್ರಾಮಸ್ಥರ ಎಲ್ಲಾ ಸಮಸ್ಯೆಗಳನ್ನು ಆಲಿಸಿ ನಂತರ ಈ ಆಸ್ಪತ್ರೆಗೆ ಸಮಸ್ಯೆಗಳ ಬಗ್ಗೆ ಲಿಖಿತ ರೂಪದಲ್ಲಿ ಮನವಿ ನೀಡುವಂತೆ ತಿಳಿಸಿದರು. ರಾತ್ರಿ ಪಾಳಿಯದ ವೈದ್ಯರು ಬೇಕು ಉಸಿರಾಟದ ತೊಂದರೆ ಬಂದವರಿಗೆ ಆ್ಯಕ್ಸಿಜನ್ ವ್ಯವಸ್ಥೆಯಾಗಬೇಕು ಆ್ಯಂಬ್ಯುಲೆನ್ಸ್ ಸೇವೆ ಸಿಗಬೇಕು. ಮರಣೋತ್ತರ ಪರೀಕ್ಷೆ ಕೊಠಡಿ ದುರಸ್ತಿಪಡಿಸಬೇಕು, ಶುಶ್ರೂಷಕಿ ‘ಡಿ’ಗ್ರೂಫ್ ನೌಕರರ ನೇಮಿಸಬೇಕು ಎಂದು ಗ್ರಾ.ಪಂ. ಅಧ್ಯಕ್ಷರು ಪಂಚಾಯಿತಿಯಿAದ ಡಿಹೆಚ್‌ಓಗೆ ಮನವಿ ನೀಡಿದರು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಡಳಿತಾಧಿಕಾರಿ ವೈದ್ಯರು ರಜೆ ಹಾಕದೆ ತೆರಳಿದ್ದಾರೆ. ಇದರಿಂದ ಇಲ್ಲಿ ಗೊಂದಲ ಸೃಷ್ಟಿಯಾಗಿದೆ. ಈಗ ತಾತ್ಕಾಲಿಕವಾಗಿ ೩ ವೈದ್ಯರನ್ನು ನೇಮಿಸಿದ್ದೇವೆ. ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇವೆ. ಇಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಮತ್ತೆ ಕರ್ತವ್ಯ ನಿರ್ವಹಿಸಬಹುದು. ಏಕಾಏಕಿ ಸರಕಾರಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಡಿಎಚ್‌ಓ ಡಾ. ವೆಂಕಟೇಶ್ ಹೇಳಿದರು.

ನಮ್ಮ ಸಮಸ್ಯೆ ಬಗೆಹರಿಯದಿದ್ದಲ್ಲಿ ೧೫ ದಿನದ ಒಳಗೆ ರಾಷ್ಟಿçÃಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಆಲಿಕುಟ್ಟಿ, ಶಬ್ಬೀರ್, ರಫೀಕ್‌ಖಾನ್, ರೇಷ್ಮ, ನಾಗರತ್ನ, ಹಸೀನಾ ಹಾಗೂ ಎಸ್‌ಡಿಪಿಐ ಕಾರ್ಯಕರ್ತ ಲತೀಫ್, ಗ್ರಾ.ಪಂ. ಮಾಜಿ ಸದಸ್ಯ ಉಸ್ಮಾನ್, ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಶಬ್ಬೀರ್, ಆಲಿಕುಟ್ಟಿ, ರಫೀಕ್‌ಖಾನ್, ನಾಗರತ್ನ, ಹಸೀನಾ, ರೇಷ್ಮ, ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶರೀಫ್, ಗ್ರಾ.ಪಂ. ಮಾಜಿ ಸದಸ್ಯ ಉಸ್ಮಾನ್, ಲತೀಫ್, ಗ್ರಾಮಸ್ಥರು ಇದ್ದರು.